ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ಐ.ಸಿ.ಎಸ್.ಇ. ಪಠ್ಯಕ್ರಮ ಅಳವಡಿಸಿಕೊಂಡಿರುವ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಐ.ಸಿ.ಎಸ್.ಇ. ಮತ್ತು ಸಿ.ಬಿ.ಎಸ್.ಇ. ಶಾಲೆಗಳ ಒಕ್ಕೂಟದ ಪ್ರಸ್ತುತ ವರುಷದ ಸಾಂಸ್ಕೃತಿಕ
ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 15, 2022 ರಂದು ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 28 ಐ.ಸಿ.ಎಸ್.ಇ. ಮತ್ತು ಸಿ.ಬಿ.ಎಸ್.ಇ. ಶಾಲೆಗಳು ಭಾಗವಹಿಸಲಿವೆ. ಜೂನಿಯರ್ ವಿಭಾಗದಲ್ಲಿ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ, ಅಗ್ನಿರಹಿತ ಅಡುಗೆ, ಛದ್ಮವೇಷ, ಪುಷ್ಪಾಲಂಕಾರ ಮತ್ತು ಆವೆಮಣ್ಣಿನ ಪ್ರತಿಕೃತಿ ರಚನಾ ಸ್ಪರ್ಧೆಗಳನ್ನು ಹಾಗೂ ಸೀನಿಯರ್ ವಿಭಾಗದಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಮೂಹ ನೃತ್ಯ, ರಂಗೋಲಿ, ವರ್ಣಚಿತ್ರ, ಹಣ್ಣು ಮತ್ತು ತರಕಾರಿಗಳಲ್ಲಿ ಕಲಾಕೃತಿ ರಚನೆ ಮತ್ತು ಭಾವಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ಅಂದು ಬೆಳಿಗ್ಗೆ 9.30 ಕ್ಕೆ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿ ಶ್ರೀಮತಿ ಎಲಿಜಾ ವಾಜ಼್, ಎ.ಐ.ಸಿ.ಎಸ್.ನ ಉಡುಪಿ ಮತ್ತು ದ.ಕ. ಜಿಲ್ಲೆಯ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರು, ಕ್ರೈಸ್ಟ್ ಸ್ಕೂಲ್, ಮಣಿಪಾಲ ಇವರು ನೆರವೇರಿಸಲಿದ್ದಾರೆ.
ಅಪರಾಹ್ನ 3.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀಮತಿ ಗೀತಾ ಶಶಿಧರ್, ಪ್ರಾಂಶುಪಾಲರು, ಆನಂದತೀರ್ಥ ವಿದ್ಯಾಲಯ, ಪಾಜಕ, ಉಡುಪಿ ಇವರು ಭಾಗವಹಿಸುತ್ತಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರು: ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ರಾಜ್, ಸಾಂಸ್ಕೃತಿಕ ಸ್ಪರ್ಧಾ ಸಂಯೋಜಕರಾದ ಶ್ರೀಮತಿ ಶುಭಾ ರಾವ್ ಮತ್ತು ಡಿಸಿಪ್ಲಿನ್ ಇನ್‌ಚಾರ್ಜ್ ಶ್ರೀ ದಾಮೋದರ್
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – yakshadeepa@gmail.com