Saturday, January 18, 2025
Homeಸುದ್ದಿಅಬ್ಬಬ್ಬಾ.. 2500 ಹಿಂದಿ ಥಿಯೇಟರ್ ನಲ್ಲಿ ಓಡಲಿರುವ 'ಕಾಂತಾರ' ಸಿನಿಮಾದ ಹಿಂದಿ ಅವತರಣಿಕೆ! - ನಾಳೆ...

ಅಬ್ಬಬ್ಬಾ.. 2500 ಹಿಂದಿ ಥಿಯೇಟರ್ ನಲ್ಲಿ ಓಡಲಿರುವ ‘ಕಾಂತಾರ’ ಸಿನಿಮಾದ ಹಿಂದಿ ಅವತರಣಿಕೆ! – ನಾಳೆ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ‘ಕಾಂತಾರ’ ಸಿನಿಮಾ 

ಕನ್ನಡ ಮಾತ್ರವಲ್ಲದೆ ಇತರ ಭಾಷಿಕರಿಂದಲೂ ವ್ಯಾಪಕವಾಗಿ ಪ್ರಶಂಶಿಸಲ್ಪಟ್ಟ ‘ಕಾಂತಾರ’ ಕನ್ನಡ ಸಿನಿಮಾ ಇದೀಗ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. 

ಯಶಸ್ಸನ್ನು ಕಂಡು ಇದೀಗ ಕನ್ನಡದ ಕಾಂತಾರವನ್ನ (Bollywood) ಬಾಲಿವುಡ್​ ನಲ್ಲೂ ರಿಲೀಸ್ ಮಾಡಲು ಹೊಂಬಾಳೆ ಪ್ರೋಡಕ್ಷನ್ ನಿರ್ಧರಿಸಿದೆ. ಹಿಂದಿ ಭಾಷೆಯಲ್ಲಿ ಸುಮಾರು 2500 ಥೀಯೇಟರ್ ಗಳಲ್ಲಿ ನಾಳೆ ಶುಕ್ರವಾರ ಕಾಂತಾರ ಸಿನಿಮಾದ ಹಿಂದಿ ಆವೃತ್ತಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.  

 ಕಾಂತಾರ (Kantara) ಕನ್ನಡ ಸಿನಿಮಾ ನಾಳೆ ಶುಕ್ರವಾರದಿಂದ ಹಿಂದಿಯಲ್ಲಿ (Hindi) 2500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್ ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಾಲಿವುಡ್ ಮಂದಿಯ ಆತಂಕ, ಅಸೂಯೆಗೆ ಕಾರಣವಾಗಿದೆ.

ಪ್ಲಾಫ್ ಸಿನಿಮಾಗಳಿಂದ ಕಂಗೆಟ್ಟಿರುವ ಬಾಲಿವುಡ್ ನಿರ್ಮಾಪಕರು ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಹೆದರಿದ್ದಾರೆ. 

ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಯಶಸ್ಸು ಗಳಿಸಿದ್ದ ಹೊಂಬಾಳೆ ಫಿಲ್ಮಸ್, ಕಾಂತಾರದ ಮೂಲಕ ಮತ್ತೊಂದು ಗೆಲುವಿನ ನಾಗಾಲೋಟಕ್ಕೆ ತಯಾರಾಗಿದೆ. 

ಕನ್ನಡದಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಆಗಿದ್ದರೂ  ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹಿಂದಿ ಅಲ್ಲದೆ ತೆಲುಗು, ಮಲಯಾಳ ಮತ್ತು ತಮಿಳು ಭಾಷೆಗಳಲ್ಲಿಯೂ ಕಾಂತಾರ  ಬಿಡುಗಡೆಯಾಗಲಿದೆ. 

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments