Thursday, November 21, 2024
Homeಸುದ್ದಿಮಂಗಳೂರಿನಲ್ಲಿ ಸಿಐಎಸ್‌ಎಫ್‌ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜ್ಯೋತಿ (33) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ...

ಮಂಗಳೂರಿನಲ್ಲಿ ಸಿಐಎಸ್‌ಎಫ್‌ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜ್ಯೋತಿ (33) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಘಟಕದಲ್ಲಿ ದಾಖಲು  

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜ್ಯೋತಿ (33) ಅವರು ಆತ್ಮಹತ್ಯೆ ಯತ್ನವೊಂದರಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾರೆ.

ಮಂಗಳೂರು, ಅಕ್ಟೋಬರ್ 12 (ಪಿಟಿಐ) ಹೊಸ ಮಂಗಳೂರು ಬಂದರು ಟ್ರಸ್ಟ್‌ನಲ್ಲಿ (ಎನ್‌ಎಂಪಿಟಿ) ಸಿಐಎಸ್‌ಎಫ್‌ಗೆ ಲಗತ್ತಿಸಲಾದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬುಧವಾರ ಬಂದರು ಟ್ರಸ್ಟ್‌ನ ಮುಖ್ಯ ಗೇಟ್‌ನಲ್ಲಿ ಬೆಳಗ್ಗೆ 6 ರಿಂದ 6.15 ರ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ವಿವಾದದ ನಂತರದ ತೀವ್ರ ಹತಾಶೆಯಲ್ಲಿ ಅವರು ಈ ಕೃತ್ಯ ಎಸಗಿದ್ದಾರೆಂದು ಹೇಳಲಾಗುತ್ತದೆ. ಇವರು ಇಲ್ಲಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್) ಸಹಾಯಕ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಒಂಬೀರ್ ಸಿಂಗ್ ಪರ್ಮಾರ್ ಅವರ ಪತ್ನಿ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಪತ್ನಿ ಇಬ್ಬರೂ ರಾಜಸ್ಥಾನದ ಭರತ್ ಪುರ ಜಿಲ್ಲೆಯವರು. “ಗಾಯಾಳುವನ್ನು ನಗರದ ಎ.ಜೆ ಆಸ್ಪತ್ರೆಗೆ ಸೇರಿಲಾಗಿದೆ. ಶಾಸ್ತ್ರವಿಹಿಕಿತ್ಸೆ ನಡೆಯುತ್ತಿದೆ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸುವ ಮುನ್ನ ಜ್ಯೋತಿ ಅಮ್ಮನಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ “ನನ್ನನ್ನು ಕ್ಷಮಿಸು ಅಮ್ಮಾ, ನಾನು ಸ್ವ ಇಚ್ಛೆಯಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಯಾರೂ ಒತ್ತಡ ಹಾಕಿಲ್ಲ” ಎಂದು ಹಿಂದಿಯಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments