Saturday, January 18, 2025
Homeಸುದ್ದಿಜಾರ್ಖಂಡ್‌ನ ದುಮ್ಕಾದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತೊಬ್ಬ ಬುಡಕಟ್ಟು ಯುವತಿಯ ಶವ ಪತ್ತೆ

ಜಾರ್ಖಂಡ್‌ನ ದುಮ್ಕಾದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತೊಬ್ಬ ಬುಡಕಟ್ಟು ಯುವತಿಯ ಶವ ಪತ್ತೆ

ಜಾರ್ಖಂಡ್‌ನ ದುಮ್ಕಾದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತೊಬ್ಬ ಬುಡಕಟ್ಟು ಯುವಕನ ಶವ ಪತ್ತೆಯಾಗಿದೆ. ಶವವನ್ನು ಮೊದಲು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಬಾಲಕಿಯ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಕಳೆದ ಮೂರು ತಿಂಗಳಲ್ಲಿ ದುಮ್ಕಾದಿಂದ ವರದಿಯಾಗುತ್ತಿರುವ ನಾಲ್ಕನೇ ಘಟನೆ ಇದಾಗಿದೆ.

ಶವವನ್ನು ಮೊದಲು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ದೇಹವು ಸಂಪೂರ್ಣವಾಗಿ ಕೊಳೆತ ಹಾಗಿದೆ, ಇದು ಹಲವು ದಿನಗಳ ಹಿಂದೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂಬ ಅಂಶವನ್ನು ತೋರಿಸುತ್ತದೆ.

10 ನೇ ತರಗತಿಯ ವಿದ್ಯಾರ್ಥಿನಿ ಎಂದು ಗುರುತಿಸಲಾದ ಬಾಲಕಿ ತನ್ನ ಅಜ್ಜಿ ಮತ್ತು ಒಡಹುಟ್ಟಿದವರ ಜೊತೆ ದುಮ್ಕಾದ ಅಂಬಾಜೋರಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆಕೆ ಯುವಕನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ – ರಾಮ್‌ಕುಮಾರ್ ಮರಾಂಡಿ, ಎಂಬವನು ಅವರು ಆಗಾಗ್ಗೆ ಹುಡುಗಿ ಇರುವ ಮನೆಗೆ ಬಂದು ಹುಡುಗಿಯನ್ನು ಭೇಟಿಯಾಗುತ್ತಿದ್ದರು. ಇದರಿಂದ ಬೇಸರಗೊಂಡ ಜಮೀನು ಮಾಲೀಕರು ಬಾಲಕಿಯ ಕುಟುಂಬಸ್ಥರನ್ನು ಬೇರೆಡೆಗೆ ತೆರಳುವಂತೆ ಹೇಳಿದ್ದರು.

ಸಂತ್ರಸ್ತೆಯ ತಂದೆ ಸೆಪ್ಟೆಂಬರ್ 26 ರಂದು ಅವಳನ್ನು ಭೇಟಿಯಾಗಲು ಬಂದರು ಮತ್ತು ಅವಳೊಂದಿಗೆ ಮಾತನಾಡಲು ಪ್ರಯತ್ನಿಸಿದರು. ತನ್ನ ಮಗಳ ಪರೀಕ್ಷೆಗಳು ಮುಗಿಯುವವರೆಗೆ ಅವರನ್ನು ಇರಲು ಬಿಡುವಂತೆ ಅವನು ಮಾಲೀಕರನ್ನು ಕೇಳಿದನು. ಆದರೆ, ಮರುದಿನ ಬಾಲಕಿ ಅಂಬಾಜೋಡದಿಂದ ಜಿಲ್ಲೆಯ ಬಡ್ತಲ್ಲ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ತೆರಳಿದ್ದಳು.

ಅಕ್ಟೋಬರ್ 7 ರಂದು ಪೋಷಕರ ಮನೆಗೆ ಹೋಗುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಳು. ಆದರೆ ಆಕೆ ಮನೆಗೆ ಬಾರದೇ ಇದ್ದಾಗ ಮನೆಯವರು ಆಕೆಯನ್ನು ಹುಡುಕತೊಡಗಿದರು. ಆಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕುಟುಂಬದವರು ಅಕ್ಟೋಬರ್ 10 ರಂದು ರಾಮ್‌ಕುಮಾರ್ ಮರಾಂಡಿ ಅವರನ್ನು ಸಂಪರ್ಕಿಸಿದರು.

ಮರುದಿನ ಅವರು ಪೊಲೀಸರಿಗೆ ನಾಪತ್ತೆ ಪ್ರಕರಣವನ್ನು ದಾಖಲಿಸಿದರು. ಇಂದು ಬಡ್ತಲ್ಲ ಗ್ರಾಮದಲ್ಲಿ ಬಾಲಕಿಯೊಬ್ಬಳು ಮರಕ್ಕೆ ನೇಣು ಬಿಗಿದಿರುವ ಸುದ್ದಿ ತಿಳಿದ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಬಾಲಕಿಯ ಶವ ಪತ್ತೆ ಮಾಡಿದ್ದಾರೆ.

“ಹುಡುಗಿ ಪೂಜೆ ರಜೆಯಲ್ಲಿ ಚಿಕ್ಕಪ್ಪನ ಮನೆಗೆ ತಂಗಲು ಬಂದಿದ್ದಳು. ಆಕೆ ಅಕ್ಟೋಬರ್ 7 ರಂದು ತನ್ನ ಮನೆಯಿಂದ ಹೊರಟು ಹೋಗಿದ್ದಳು, ಆದರೆ ನಿನ್ನೆ ಸಂಜೆಯವರೆಗೂ ಆಕೆಯ ಕುಟುಂಬದವರು ಯಾವುದೇ ದೂರು ನೀಡಿರಲಿಲ್ಲ. ಇಂದು ಬೆಳಗ್ಗೆ ನಾವು ಬಾಲಕಿಯ ಶವವನ್ನು ಬಡ್ತಲ್ಲಾದ ಮರದಿಂದ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪ್ರೇಮ ಸಂಬಂಧವಿದೆ ಮತ್ತು ನಾವು ಅದನ್ನು ಕೊಲೆ ಪ್ರಕರಣವೆಂದು ತನಿಖೆ ಮಾಡುತ್ತೇವೆ” ಎಂದು ಅವರುಹೇಳಿದ್ದಾರೆ.

ಬಿಜೆಪಿ ಮುಖಂಡ ಮತ್ತು ಮಾಜಿ ಸಮಾಜ ಕಲ್ಯಾಣ ಸಚಿವ ಲೂಯಿಸ್ ಮರಾಂಡಿ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳ ನಿರಂತರ ಸುದ್ದಿಗಳು ಬರುತ್ತಿದ್ದು, ಇದು ಅತ್ಯಂತ ಕಳವಳಕಾರಿಯಾಗಿದೆ. ಕಳೆದ ಮೂರು ತಿಂಗಳಲ್ಲಿ ದುಮ್ಕಾ ಜಿಲ್ಲೆಯಲ್ಲಿ ವರದಿಯಾದ ನಾಲ್ಕನೇ ಘಟನೆ ಇದಾಗಿದೆ. ಈ ಬಗ್ಗೆ ಕಠಿಣ ಕಾನೂನು ರೂಪಿಸುವ ಅಗತ್ಯವಿದೆ. ಇಲ್ಲದಿದ್ದರೆ, ಎಷ್ಟು ಹುಡುಗಿಯರು ಇದನ್ನು ಎದುರಿಸಬೇಕಾಗುತ್ತದೆ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments