ಆಗ ತಾನೇ ಕಟ್ಟಿದ ಹೊಸ ಮನೆಗೆ ವಿದ್ಯುತ್ ಅರ್ಥಿಂಗ್ ಮಾಡಲು ಗುಂಡಿ ತೋಡುತ್ತಿದ್ದಾಗ ಅಚ್ಚರಿಯೊಂದು ಕಂಡಿದೆ.
ಮೊದಲು ದೊಡ್ಡದಾದ ಬಂಡೆ ಕಲ್ಲು ಸಿಕ್ಕಿತು. ಅದನ್ನು ತೆಗೆದ ಕೂಡಲೇ ಅದರಡಿಯಲ್ಲಿ ದೇವರ ವಿಗ್ರಹಗಳ ಕೆತ್ತನೆ (Stone God Statue) ಕಂಡುಬಂದಿವೆ.
ಈ ಘಟನೆ ನಡೆದದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು (Gauribidanur) ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮದಲ್ಲಿ. ಶಿವಕುಮಾರ್ ಮತ್ತು ಬಾಬು ಎಂಬ ಅಣ್ಣ ತಮ್ಮಂದಿರು, ತೋಟದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು ಮನೆಗೆ ವಿದ್ಯುತ್ ಸಂಪರ್ಕ ನೀಡಲು ಅರ್ಥ್ ಕೇಬಲ್ ಆಳವಡಿಸಲು ಮನೆಯ ಪಕ್ಕದಲ್ಲೇ ಗುಂಡಿ ಅಗೆಯುವಾಗ ಈ ಕಲ್ಲಿನ ಕೆತ್ತನೆಗಳು ಪತ್ತೆಯಾಗಿವೆ.
ಸುದ್ದಿ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿದ್ದಾರೆ. ಪೂಜಾಸಾಮಗ್ರಿಗಳೊಂದಿಗೆ ಆಗಮಿಸಿ ಭಕ್ತಿಯಿಂದ ಪೂಜೆ ಮಾಡುತ್ತಿದ್ದಾರೆ. ಈ ವಿಗ್ರಹಗಳು ಏಕಶಿಲೆಯಲ್ಲಿ ಕೆತ್ತಲಾಗಿದ್ದು ವಿಷ್ಣು ಮತ್ತು ಲಕ್ಷ್ಮಿ ದೇವರ ವಿಗ್ರಹಗಳು ಜೊತೆಯಲ್ಲಿವೆ.
ಈ ವಿಗ್ರಹಗಳು ಯಾವ ಕಾಲದ್ದು ಎಂದು ಇನ್ನು ಪತ್ತೆ ಮಾಡಬೇಕಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರು ಬಂದು ಇದರ ಬಗ್ಗೆ ಪರಿಶೀಲನೆ ನಡೆಸಿದ ನಂತರವೇ ಮುಂದಿನ ಮಾಹಿತಿಗಳು ಲಭ್ಯವಾಗಲಿವೆ.
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
