Friday, November 15, 2024
Homeಯಕ್ಷಗಾನಮೂಡಬಿದಿರೆ ಯಕ್ಷೋಪಾಸನಂ ಸಂಸ್ಥೆಯ ದಶಮಾನೋತ್ಸವ : ಸನ್ಮಾನ ಮತ್ತು ತಾಳಮದ್ದಳೆ

ಮೂಡಬಿದಿರೆ ಯಕ್ಷೋಪಾಸನಂ ಸಂಸ್ಥೆಯ ದಶಮಾನೋತ್ಸವ : ಸನ್ಮಾನ ಮತ್ತು ತಾಳಮದ್ದಳೆ

ಮೂಡಬಿದ್ರೆಯ ಯಕ್ಷೋಪಾಸನಮ್ ಇದರ ದಶಮಾನೋತ್ಸವ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೂಡಬಿದ್ರೆ ಸಮಾಜ ಮಂದಿರದಲ್ಲಿ ಜರುಗಿತು

ಮೂಡಬಿದರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಯಕ್ಷಗಾನ ಕಲಾಪ್ರಸಾರದಲ್ಲಿ ಹವ್ಯಾಸಿ ಕಲಾವಿದರು ಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡುತ್ತಿದ್ದಾರೆ. ಬೇರೆ ಯಾವ ಪ್ರದೇಶದಲ್ಲಿಯೂ ಕಾಣಿಸದ ಈ ಕಲಾ ಪ್ರಕಾರದಲ್ಲಿ ನೂರಾರು ಕಲಾವಿದರು ಪುರಾಣ ಪಾತ್ರಗಳ ಮೂಲಕ ಜ್ಞಾನ ಭಂಡಾರವನ್ನು ಸಮಾಜಕ್ಕೆ ಸಮರ್ಪಿಸುತ್ತಿರುವುದು ಭಗವಂತನಿಗೆ ಅತ್ಯಂತ ಪ್ರಿಯವಾದ ಕಾರ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ ನಮ್ಮ ಹಿರಿಯರಲ್ಲಿ ವಿದ್ಯೆ ಕಡಿಮೆ ಇದ್ದರೂ ವಿದ್ವತ್ ಅಪಾರವಾಗಿತ್ತು. ಆ ಮೂಲಕ ಪುರಾಣದ ಕಥೆಗಳು ಮನೆಮನೆಗಳಲ್ಲಿ ಕೇಳಿ ಬರುತ್ತಿತ್ತು .ಇಂದು ಯಕ್ಷಗಾನ ಅಪಾರ ಜನಪ್ರಿಯವಾಗುವಲ್ಲಿ ಕಲಾವಿದರ ಮತ್ತು ಸಂಘಟಕರ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿ ಮೂಡಬಿದಿರೆಯ ಸಾಂಸ್ಕೃತಿಕ ಲೋಕದಲ್ಲಿ ಯಕ್ಷೋಪಾಸನಂ ಸಂಸ್ಥೆಯು ದೊಡ್ಡ ಸಾಧನೆಯನ್ನು ಮಾಡಲಿ ಎಂದರು.

ದಶಮಾನೋತ್ಸವದ ಪ್ರಯುಕ್ತ ಹಿರಿಯ ಕಲಾವಿದ ದಾಮೋದರ ಸಫಲಿಗ ಇವರನ್ನು ಸನ್ಮಾನಿಸಲಾಯಿತು.

ಯಕ್ಷೋಪಾಸನಂ ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದ ಮೂಡಬಿದ್ರೆ ಮಾರಿಗುಡಿಯ ಆಡಳಿತ ಸಮಿತಿ ಅಧ್ಯಕ್ಷ ರಾಜಮೋಹನ್ ಶೆಟ್ಟಿ, ಮಿತ್ತ ಬೈಲು ರಾಮಮಂದಿರದ ಗಿರಿಧರ ನಾಯಕ್, ಗುಣಪಾಲ ಶೆಟ್ಟಿ, ಅರುಣ್ ಕುಮಾರ್, ದಿವಾಣ ದುರ್ಗಾ ಪ್ರಸಾದ್ ಭಟ್ ಕಟೀಲು ಇವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಪುರಸಭಾ ಸದಸ್ಯ ಸುರೇಶ್ ಪ್ರಭು, ಕೆ .ಪ್ರೇಮನಾಥ ಮಾರ್ಲ, ಉದ್ಯಮಿ ನೀಲೇಶ್ ಶೆಟ್ಟಿ , ಪುನೀತ್ ಕುಮಾರ್ ಕಟ್ಟೆಮಾರು ಶುಭ ಹಾರೈಸಿದರು.

ಶ್ರೀಮತಿ ಅನುರಾಧ ಪೈ ಪ್ರಾರ್ಥಿಸಿ ಯಕ್ಷೋಪಾಸನಮ್ ಅಧ್ಯಕ್ಷ ಶಾಂತರಾಮ ಕುಡ್ವ ಸ್ವಾಗತಿಸಿದರು. ಸ್ವಾತಿ. ಎಸ್ ಪ್ರಭು ವಂದಿಸಿದರು .ರಾಜಾರಾಮ್ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು

ಆರಂಭದಲ್ಲಿ ಯಕ್ಷೋಪಾಸನ ಸದಸ್ಯರಿಂದ ಶ್ರೀರಂಗಾ ತುಲಾಭಾರ ಬಳಿಕ ಪ್ರಸಿದ್ಧ ಕಲಾವಿದರಿಂದ ಕರ್ಣಾರ್ಜುನ ತಾಳಮದ್ದಳೆ ಜರಗಿತು.

ದಿವಾಕರ ಆಚಾರ್ಯ ಗೇರುಕಟ್ಟೆ

ವರದಿ: ದಿವಾಕರ ಆಚಾರ್ಯ ಗೇರುಕಟ್ಟೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments