ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ನಲ್ಕ ಎಂಬಲ್ಲಿ ಕಾರು ಅಪಘಾತ ಸಂಭವಿಸಿದೆ.
ಪೆರ್ಲಕ್ಕೆ ಹೋಗುತ್ತಿದ್ದ ಮಾರುತಿ ಒಮ್ನಿ ನಲ್ಲ ಬಸ್ ನಿಲ್ದಾಣದ ಬೋರ್ಡ್ ಹಾಕಿದ್ದ ಕಂಬಕ ಗುದ್ದಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ.
ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ನಾಗೇಶ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಸ್ಥಳಕ್ಕೆ ಬದಿಯಡ್ಕ ಪೋಲೀಸರು ತೆರಳಿ ಪರಿಶೀಲನೆ ನಡೆಸಿದರು.