ಕಡಬ ಸಂಸ್ಮರಣಾ ಸಮಿತಿ ಮಂಗಳೂರು – 3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2022 ಮತ್ತು ಯಕ್ಷಗಾನ ಕಾರ್ಯಕ್ರಮ



ಕಡಬ ಸಂಸ್ಮರಣಾ ಸಮಿತಿ ಮಂಗಳೂರು ಇವರು ಆಯೋಜಿಸಿದ 3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರಶಸ್ತಿ-2022 ಕಿನ್ನಿಕಂಬಳದಲ್ಲಿ ನಡೆಯಲಿದೆ.
ಕಾರ್ಯಕ್ರಮವು ದಿನಾಂಕ 9-10-2022 ಆದಿತ್ಯವಾರ ಅಪರಾಹ್ನ 2-00 ಗಂಟೆಯಿಂದ ಶ್ರೀ ರಾಧಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳ ಕೈಕಂಬ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಬಾರಿಯ ಕಡಬದ್ವಯ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಮದ್ದಳೆಗಾರ ಶ್ರೀ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ನೀಡಲಾಗುತ್ತದೆ.
ಎಲ್ಲಾ ಯಕ್ಷಗಾನ ಅಭಿಮಾನಿಗಳನ್ನು ಕಡಬ ಸಂಸ್ಕರಣಾ ಸಮಿತಿಯ ಕಾರ್ಯದರ್ಶಿ ಶ್ರೀ ಗಿರೀಶ್ ಕಾವೂರು ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.
ಕಾರ್ಯಕ್ರಮಗಳ ವಿವರಗಳನ್ನು ಕರಪತ್ರದಲ್ಲಿ ನೋಡಿ.
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – yakshadeepa@yakshadeepa