ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜೆ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 02.10.2022, ರವಿವಾರ ವೇದಮೂರ್ತಿ ಶ್ರೀ ಕಾರ್ತಿಕ್ ಶಾಸ್ತ್ರಿ ಮತ್ತು ಬಳಗದವರು ಶಾರದಾಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ನಂತರ ಶಾಲಾ ವಾಹನ ಪೂಜೆಯನ್ನು ನೆರವೇರಿಸಲಾಯಿತು.
ನಂತರ 50 ಪುಟಾಣಿಗಳು ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ಮಕ್ಕಳಿಗೆ ತಿಲಕ ಇಟ್ಟು ಆರತಿ ಎತ್ತಿ ಶಾರದ ಮಾತೆಗೆ ಪುಷ್ಪ ನಮನವನ್ನು ಸಲ್ಲಿಸಿದರು. ಶಾಲಾ ಶಿಕ್ಷಕಿಯರು ಶ್ರೀ ಲಲಿತಾಸಹಸ್ರನಾಮ ಪಠಣ ಮಾಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


