ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ 28ನೇ ವರ್ಷದ ಸಾರ್ವಜನಿಕ ಶಾರದೋತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ಸದಸ್ಯರಿಂದ ‘ತರಣಿಸೇನ ಕಾಳಗ’ ತಾಳಮದ್ದಳೆ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ಮತ್ತು ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ಅಂಬಾಪ್ರಸಾದ್ ಪಾತಾಳ(ತರಣಿಸೇನ) ಗುಡ್ಡಪ್ಪ ಬಲ್ಯ(ರಾವಣ) ತಿಲಕಾಕ್ಷ(ರಾವಣದೂತ) ಶ್ರೀಮತಿ ಪುಷ್ಪಲತಾ .ಎಂ(ಸರಮೆ) ವಿಜಯಕುಮಾರ್ ಕೊಯ್ಯುರು(ಸುಪಾಶ್ವಕ) ಸಂಜೀವ ಪಾರೆಂಕಿ(ವಿಭೀಷಣ) ದಿವಾಕರ ಆಚಾರ್ಯ ನೇರೆಂಕಿ (ತರಣಿಸೇನ) ದಿವಾಕರ್ ಆಚಾರ್ಯ ಗೇರುಕಟ್ಟೆ(ಶ್ರೀರಾಮ) ಭಾಗವಹಿಸಿದ್ದರು.
ಶ್ರೀ ಶಾರದೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಉಮೇಶ ಶೆಣೈ .ಯನ್, ಸಮಿತಿಯ ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ಕಂಗ್ವೆ ಪುಷ್ಪರಾಜ ಶೆಟ್ಟಿ, ಜಯಂತ ಪುರೋಳಿ, ಶ್ರೀಮತಿ ಶಾಮಲಾ ಶೆಣೈ ಕಲಾವಿದರನ್ನು ಗೌರವಿಸಿದರು. ಸಂಘದ ಹಿರಿಯ ಸದಸ್ಯ ಬಿ. ಸುಬ್ರಹ್ಮಣ್ಯರಾವ್ ಉಪಸ್ಥಿತರಿದ್ದರು.
ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ್ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ವಂದಿಸಿದರು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688