ಸೀಟಿಗಾಗಿ ಇಬ್ಬರು ಮಹಿಳೆಯರ ನಡುವೆ ರೈಲಿನಲ್ಲಿ ಭೀಕರ ಹೊಡೆದಾಟ ನಡೆದ ಪ್ರಕರಣ ವರದಿಯಾಗಿದೆ. ತಡೆಯಲು ಬಂದ ಮಹಿಳಾ ಪೊಲೀಸ್ ಗೂ ತಲೆಗೆ ಏಟು ಬಿದ್ದು ರಕ್ತ ಸೋರುತ್ತಿತ್ತು.
ಇನ್ನಿಬ್ಬರು ಮಹಿಳೆಯರಿಗೂ ಗಾಯಗಳಾಗಿವೆ. ನವಿ ಮುಂಬೈಯ ವಾಶಿಯಲ್ಲಿ ಸೀಟಿನ ವಿವಾದದ ನಂತರ ಕೆಲವು ಮಹಿಳೆಯರು ಒಬ್ಬರಿಗೊಬ್ಬರು ಹೊಡೆಯಲು ಪ್ರಾರಂಭಿಸಿದರು.
ಮಧ್ಯಪ್ರವೇಶಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ಗಾಯಗೊಂಡರು ಎಂದು ವಾಶಿ ರೈಲು ನಿಲ್ದಾಣದ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಕಟಾರೆ ತಿಳಿಸಿದ್ದಾರೆ.
ಇಂದು ಥಾಣೆಯಿಂದ ಪನ್ವೇಲ್ ಗೆ ಓಡುವ ಸ್ಥಳೀಯ ರೈಲಿನಲ್ಲಿ 3 ಮಹಿಳೆಯರ ಜಗಳ ತಾರಕಕ್ಕೇರಿತ್ತು. ರೈಲಿನಲ್ಲಿ ಸೀಟಿನ ವಿಚಾರವಾಗಿ ನವಿ ಮುಂಬೈನ ತುರ್ಭೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ನಡುವೆ ಭೀಕರ ಹೊಡೆದಾಟ ನಡೆಯಿತು.
ಇಡೀ ಪ್ರಕರಣದಲ್ಲಿ, ಮಹಿಳಾ ಪೊಲೀಸರು ಮಧ್ಯಪ್ರವೇಶಿಸಲು ಪ್ರಯತ್ನಿಸುವಾಗ ಗಾಯಗೊಂಡರು. ಆ ನಂತರ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಮಹಿಳೆಯರೂ ತಲಾ ಒಂದು ದೂರು ದಾಖಲಿಸಿದ್ದಾರೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]