Sunday, January 19, 2025
Homeಸುದ್ದಿವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣ ಸಮಾರಂಭ

ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣ ಸಮಾರಂಭ

ಉಡುಪಿ :ಯಕ್ಷಗಾನ ಕಲಾರಂಗ (ರಿ.), ಉಡುಪಿ ಇದರ ಅಂಗ ಸಂಸ್ಥೆಯಾದ ವಿದ್ಯಾಪೋಷಕ್‌ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ 17 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದು ಈ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವು ಅಕ್ಟೋಬರ್ 9, 2022 ಭಾನುವಾರ ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಪನ್ನಗೊಳ್ಳಲ್ಲಿದೆ.

ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪೂರ್ವಾಹ್ನ 10.00 ಗಂಟೆಗೆ ಉದ್ಘಾಟಿಸಲಿದ್ದಾರೆ.ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ವಹಿಸಲಿದ್ದಾರೆ.

ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಶಾಸಕರಾದ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಶುಭಾಸಂಸನೆಗೈಯಲಿದ್ದಾರೆ.

ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್, ಆನೆಗುಡ್ಡೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶ್ರೀರಮಣ ಉಪಾಧ್ಯ ಹಾಗೂ ಕುಂದೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣಾನಂದ ಛಾತ್ರ ಇವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅಭ್ಯಾಗತರಾಗಿ ಶ್ರೀ ಕಿರಣ್‌ ಕೊಡ್ಗಿ, ಶ್ರೀ ಯಶ್‌ಪಾಲ್ ಸುವರ್ಣ, ಶ್ರೀ ಕೃಷ್ಣಪ್ರಸಾದ್‌ ಅಡ್ಯಂತಾಯ, ಶ್ರೀ ರತ್ನಕುಮಾರ್, ಶ್ರೀ ಭುವನೇಂದ್ರ ಕಿದಿಯೂರು, ಶ್ರೀ ಎ.ಎಸ್.ಎನ್ ಹೆಬ್ಬಾರ್, ಶ್ರೀ ಸಜಿತ್ ಹೆಗ್ಡೆ, ಶ್ರೀ ಪಿ. ವಾಸುದೇವ ಐತಾಳ್, ಶ್ರೀ ವಿ.ಜಿ. ಶೆಟ್ಟಿ, ಶ್ರೀ ಯು.ಶ್ರೀಧರ್, ಕುಮಾರಿ ಹಸ್ತಾ ಶೆಟ್ಟಿ, ಶ್ರೀಮತಿ ವಿಲಾಸಿನಿ ಬಾಬುರಾಯ ಶೆಣೈ, ಶ್ರೀ ನವೀನ್ ಹೆಗ್ಡೆ ಹಾಗೂ ಶ್ರೀ ಪ್ರವೀಣ್‌ಗುಡಿ ಭಾಗವಹಿಸಲಿದ್ದಾರೆ.


ಅಪರಾಹ್ನ 2.30 ಗಂಟೆಗೆ ನಾಡೋಜ ಡಾ.ಜಿ. ಶಂಕರ್‌ ಇವರ ಅಧ್ಯಕ್ಷತೆಯಲ್ಲಿ ನಡೆಯುವ ವಿನಮ್ರ ಸಹಾಯ ವಿತರಣಾ ಸಮಾರಂಭದಲ್ಲಿ ಕುಂದಾಪುರ ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಉಡುಪಿ ಶಾಸಕ ಶ್ರೀ ಕೆ.ರಘುಪತಿ ಭಟ್‌ ಶುಭಾಶಂಸನೆಗೈಯಲಿದ್ದಾರೆ.

ಮಂಗಳೂರಿನ ಪ್ರೇರಣಾ ಇನ್ಫೋಸಿಸ್ ಸಂಸ್ಥೆಯ ವಿಶ್ವಸ್ಥರಾದ ಶ್ರೀ ವಾಸುದೇವ ಕಾಮತ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಿದ್ದಾರೆ.
ವಿದ್ಯಾಪೋಷಕ್ ವಿದ್ಯಾರ್ಥಿಗಳ ಗೃಹ ನಿರ್ಮಾಣಕ್ಕೆ ನೆರವಾದ ವಿದ್ವಾನ್‌ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಡಾ. ಜೆ.ಎನ್. ಭಟ್, ಶ್ರೀ ಪಿ. ಗೋಕುಲನಾಥ ಪ್ರಭು, ಶ್ರೀ ಸಿ.ಎ ಗಣೇಶ್‌ ಕಾಂಚನ್, ಶ್ರೀ ಅರುಣ್‌ ಕುಮಾರ್ ಹಾಗೂ ಶ್ರೀ ಗುರುರಾಜ ಅಮೀನ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಆನಂದ ಸಿ.ಕುಂದರ್, ಶ್ರೀ ಕೆರಾಡಿ ಚಂದ್ರಶೇಖರ ಶೆಟ್ಟಿ, ಡಾ.ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ಹರೀಶ್‌ ರಾಯಸ್, ಎಚ್. ನಾಗರಾಜ ಶೆಟ್ಟಿ, ಶ್ರೀ ಪಿ.ಪುರುಷೋತ್ತಮ ಶೆಟ್ಟಿ, ಶ್ರೀ ಸುರೇಂದ್ರ ಶೆಟ್ಟಿ, ಶ್ರೀ ಹರಿಯಪ್ಪ ಕೋಟ್ಯಾನ್, ಶ್ರೀ ಆನಂದ ಪಿ ಸುವರ್ಣ, ಯು.ವಿಶ್ವನಾಥ ಶೆಣೈ, ಶ್ರೀ ಸೀತಾರಾಮ ನಕ್ಕತ್ತಾಯ, ಶ್ರೀ ಎ. ಸಂಕಪ್ಪ, ಶ್ರೀ ಪುರುಷೋತ್ತಮ ಪಟೇಲ್, ಶ್ರೀ ಎಚ್. ಶಶಿಧರ ಶೆಟ್ಟಿ, ಶ್ರೀ ಸೀತಾರಾಮ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಅಂದು 1135 ವಿದ್ಯಾರ್ಥಿಗಳಿಗೆ ರೂಪಾಯಿ 89,85,500/- ವಿತರಣೆಯಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments