ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ಉದ್ಘಾಟನೆ ಇಂದು ನೆರವೇರಿತು.
ಶಾಸ್ತ್ರೀಯ ಸಂಗೀತ ಶಿಕ್ಷಕರಾದ ಶ್ರೀಮತಿ ಜಯಭಾರತಿ ವಿಷ್ಣು ಪ್ರಕಾಶ್, ಕಾವುಮಠ ಇವರು ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಸಂಗೀತ ಶಿಕ್ಷಣ ತರಗತಿಗೆ ಚಾಲನೆ ನೀಡಿದರು.
ಪ್ರತಿಷ್ಠಾನದ ಮುಖ್ಯಸ್ಥರಾದ ಭಾಗವತ ಸಿರಿಬಾಗಿಲು ಶ್ರೀ ರಾಮಕೃಷ್ಣ ಮಯ್ಯ ಮತ್ತು ಪ್ರತಿಷ್ಠಾನದ ಸದಸ್ಯರಾದ ಶ್ರೀ ಎದುರ್ಕಳ ಸದಾಶಿವ ಭಟ್, ಶ್ರೀಮತಿ ಸುಮಿತ್ರಾ ಆರ್. ಮಯ್ಯ, ಶ್ರೀಮತಿ ರಾಧಾಲಕ್ಷ್ಮಿ ಲಕ್ಷ್ಮೀನಾರಾಯಣ ಕಾವುಮಠ ಉಪಸ್ಥಿತರಿದ್ದರು.

