ದಸರಾ ನಾಡಹಬ್ಬದ ಪ್ರಯುಕ್ತ ಪುತ್ತೂರಿನ ನಟರಾಜ ವೇದಿಕೆಯಲ್ಲಿ ಹವ್ಯಕ ಭಾಷೆಯ ತಾಳಮದ್ದಳೆ ನಡೆಯಿತು. ‘ಸತಿ ದಹನ’ ಎಂಬ ಸಂಪೂರ್ಣ ಹವ್ಯಕ ಭಾಷೆಯಲ್ಲಿ ಪ್ರಸ್ತುತಿಗೊಂಡ ಈ ತಾಳಮದ್ದಳೆಯನ್ನು ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ನುರಿತ ಹಾಗೂ ಪ್ರಸಿದ್ಧ ಕಲಾವಿದರು ನಡೆಸಿಕೊಟ್ಟರು.
ಹವ್ಯಕ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹಾ ಕಾರ್ಯಕ್ರಮಗಳು ಗಮನಾರ್ಹ. ದಕ್ಷಯಜ್ಞ ಎಂಬ ಕನ್ನಡ ಪ್ರಸಂಗದ ಹವ್ಯಕ ಅವತರಣಿಕೆಯಾದ ‘ಸತಿ ದಹನ’ ಪ್ರಸಂಗದಲ್ಲಿ ಪದ್ಯಗಳೂ ಹವ್ಯಕ ಭಾಷೆಯಲ್ಲಿಯೇ ರಚಿತವಾಗಿದ್ದುವು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ದಸರಾ ನಾಡಹಬ್ಬ ಸಮಿತಿ, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ, ಹಾಸ್ಯರತ್ನ ನಯನಕುಮಾರ್ ಅಭಿಮಾನಿ ಬಳಗಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಗ್ಗೆ 9.30ರಿಂದ ಆರಂಭವಾದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಭಾಗವತರಾಗಿ ರಮೇಶ್ ಭಟ್ ಪುತ್ತೂರು, ಗಿರೀಶ್ ಭಟ್ ಮುಳಿಯಾಲ ಚೆಂಡೆ, ಮದ್ದಲೆಗಳಲ್ಲಿ ಗಣೇಶ್ ಭಟ್ ಬೆಳ್ಳಾರೆ, ರಾಮಪ್ರಸಾದ್ ವದ್ವ, ಜಗನ್ನಿವಾಸ ರಾವ್,ಮತ್ತು ಅರ್ಥಧಾರಿಗಳಾಗಿ ಶಂಭು ಶರ್ಮ(ದಕ್ಷ), ಹಿರಣ್ಯ ವೆಂಕಟೇಶ್ವರ ಭಟ್(ಬ್ರಹ್ಮ), ರಾಧಾಕೃಷ್ಣ ಕಲ್ಚಾರ್(ಈಶ್ವರ), ಸೇರಾಜೆ ಸೀತಾರಾಮ ಭಟ್(ದಾಕ್ಷಾಯಿಣಿ), ಪಶುಪತಿ ಶಾಸ್ತ್ರಿ ಶಿರಂಕಲ್ಲು(ವೀರಭದ್ರ), ಹರೀಶ್ ಬಳಂತಿಮೊಗರು(ದೇವೇಂದ್ರ), ಡಾ| ಹರೀಶ್ ಜೋಶಿ ವಿಟ್ಲ(ಭೂಸುರ), ಕು| ಸಾವಿತ್ರಿ ಶಾಸ್ತ್ರಿ(ನಾರದ) ಭಾಗವಹಿಸಿದ್ದರು.
ತಾಳಮದ್ದಳೆಯ ನಂತರ ಗುರುಶಿಷ್ಯರಾದ ಕೀರ್ತಿಶೇಷ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಶಿ ಮತ್ತು ಹಾಸ್ಯರತ್ನ ನಯನಕುಮಾರ್ ಸಂಸ್ಮರಣೆ ನಡೆಯಿತು. ಪಶುಪತಿ ಶಾಸ್ತ್ರಿ ಶಿರಂಕಲ್ಲು ಸಂಸ್ಮರಣಾ ಭಾಷಣ ಮಾಡಿದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions