ವಿದ್ಯಾಭಾರತಿ ಜಿಲ್ಲಾಮಟ್ಟದ ಶಟಲ್ ಬಾಡ್‍ಮಿಂಟನ್ ಪಂದ್ಯಾಟವು ದಿನಾಂಕ 03-09-2022ರಂದು Officer’s Club ಪುತ್ತೂರು ಇಲ್ಲಿ ನಡೆದ ಸ್ಪರ್ಧೆಯಲ್ಲಿ ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.
ಬಾಲವರ್ಗದ ಬಾಲಕರ ವಿಭಾಗದಲ್ಲಿ 6ನೇ ತರಗತಿಯ ಇಶಾನ್.ಕೆ (ಶ್ರೀ ನಾರಾಯಣ ಮೂರ್ತಿ ಮತ್ತು ಪ್ರೇಮಲತ ಇವರ ಪುತ್ರ), ಹಿತನ್ ಕುಮಾರ್( ಶ್ರೀ ಉದಯ ಮತ್ತು ಲಲಿತ ಇವರ ಪುತ್ರ), 7ನೇ ತರಗತಿಯ ಕಾರ್ತಿಕ್ ಕುಮಾರ್(ಶ್ರೀ ಪ್ರಶಾಂತ್ ಕುಮಾರ್ ಮತ್ತು ಅಂಜಲಿ ಇವರ ಪುತ್ರ), ಶ್ರವಣ್.ಎಸ್( ಶ್ರೀ ರವೀಂದ್ರ ಆಚಾರ್ಯ ಮತ್ತು ಸೌಮ್ಯ ಇವರ ಪುತ್ರ) ಮತ್ತು ಮಹಿನ್.ಪಿ.ಆರ್(ಶ್ರೀ ರಾಕೇಶ್ ಕುಮಾರ್ ಮತ್ತು ಜ್ಯೋತಿ ಇವರ ಪುತ್ರ) ಇವರು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಸಮನ್ವಿತ.ಕೆ ( ಶ್ರೀ ಕಿಶೋರ್ ಕುಮಾರ್ ಮತ್ತು ರೂಪಾಶ್ರೀ.ಕೆ ಇವರ ಪುತ್ರಿ), ದಿಹರ್ಷ.ಎಸ್(ಶ್ರೀ ಶಿವಕುಮಾರ್ ಮತ್ತು ಪೊನ್ನಿ ಇವರ ಪುತ್ರಿ), 7ನೇ ತರಗತಿಯ ಕೀರ್ತನಾ (ಶ್ರೀ ಪ್ರತಾಪ್ ಸಿಂಹ ವರ್ಮ ಮತ್ತು ವೀಣಾ ಕುಮಾರಿ ಇವರ ಪುತ್ರಿ), 6ನೇ ತರಗತಿಯ ಸೃಷ್ಟಿ (ಶ್ರೀ ಬಿ.ರವಿಚಂದ್ರ ಮತ್ತು ಸುಮ ಇವರಪುತ್ರಿ) ಇವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಹರ್ಷಿತ( ಶ್ರೀ ಸಂತೋಷ್ ನಾಯ್ಕ ಮತ್ತು ಕವಿತಾ.ಕೆ ಇವರ ಪುತ್ರಿ) , ಶ್ರೇಯಾ.ರಾವ್ (ಶ್ರೀ ಅನಂತಕೃಷ್ಣ ಮತ್ತು ವೀಣಾ ಇವರ ಪುತ್ರಿ), 9ನೇ ತರಗತಿಯ ಸಾನ್ವಿ (ಶ್ರೀ ಜೆ.ನೆಲ್ಸನ್ ಮತ್ತು ವಾಣಿ.ಯು.ಹೆಚ್ ಪುತ್ರಿ), ರುಚಿತಾ.ಆರ್ (ಶ್ರೀ ರತ್ನಾಕರ್ ಪ್ರಭು ಮತ್ತು ಸವಿತಾ.ಕೆ ಇವರಪುತ್ರಿ) ಇವರು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions