ತಾಳಮದ್ದಲೆಯ ಪೋಷಕರಿಗೆ ಗೌರವಾರ್ಪಣೆ
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಪ್ರಧಾನ ಪೋಷಕರಾದ ಮೂಲತಃ ನಾಳದವರಾಗಿದ್ದು ಮಂಗಳೂರಿನ ಸೈಂಟ್ ಆನ್ಸ ಶಿಕ್ಷಕ ಶಿಕ್ಷಣ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಮತ್ತು ಯಕ್ಷಗಾನ
ವೇಷಧಾರಿಯೂ ಆಗಿರುವ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುರೇಶ್ ಕುಮಾರ್ ತುಂಬೆ ಜಾಲ್ ಮತ್ತು ಶ್ರೀಮತಿ ಶೋಭಾ ಶೆಟ್ಟಿ ಇವರನ್ನು ಸಪ್ತಾಹದ ಸಮಾರೋಪದಲ್ಲಿ ಸಂಯೋಜಕರ ಪರವಾಗಿ ಗೌರವಿಸಲಾಯಿತು.