Sunday, January 19, 2025
Homeಸುದ್ದಿಪಿಎಫ್ಐಯಿಂದ  5.6 ಕೋಟಿ ರೂಪಾಯಿ ಪರಿಹಾರ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ  ಕೆಎಸ್‌ಆರ್‌ಟಿಸಿ

ಪಿಎಫ್ಐಯಿಂದ  5.6 ಕೋಟಿ ರೂಪಾಯಿ ಪರಿಹಾರ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ  ಕೆಎಸ್‌ಆರ್‌ಟಿಸಿ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಸ್ಲಾಮಿಕ್ ಸಂಘಟನೆಯಿಂದ 5.6 ಕೋಟಿ ರೂಪಾಯಿ ಪರಿಹಾರ ಕೋರಿ ಕೆಎಸ್‌ಆರ್‌ಟಿಸಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಹರತಾಳ ಘೋಷಿಸಿದವರಿಂದ ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪಿಎಫ್ಐ 5 ಕೋಟಿ 6 ಲಕ್ಷ ಪರಿಹಾರ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಒತ್ತಾಯಿಸಿತು.

ಕೇರಳದಲ್ಲಿ ಕಳೆದ ಶುಕ್ರವಾರ ಪಾಪ್ಯುಲರ್ ಫ್ರಂಟ್ ಕರೆ ನೀಡಿದ್ದ ಹರತಾಳದ ನಂತರ ನಡೆದ ದಾಳಿಯಲ್ಲಿ 58 ಬಸ್ ಗಳನ್ನು ಧ್ವಂಸಗೊಳಿಸಲಾಗಿತ್ತು. ಹತ್ತು ನೌಕರರು ಗಾಯಗೊಂಡಿದ್ದಾರೆ.

ಇದೇ ವೇಳೆ ಪಾಪ್ಯುಲರ್ ಫ್ರಂಟ್ ನಡೆಸಿದ ಹರತಾಳದ ಅಂಗವಾಗಿ ನಡೆದ ದಾಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇದುವರೆಗೆ 309 ಪ್ರಕರಣಗಳು ದಾಖಲಾಗಿವೆ. ವಿವಿಧ ದಾಳಿಗಳಲ್ಲಿ 1404 ಆರೋಪಿಗಳನ್ನು ಬಂಧಿಸಲಾಗಿದೆ.

834 ಮಂದಿ ಮುಂಜಾಗ್ರತಾ ಕ್ರಮದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಲಪ್ಪುರಂನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮಲಪ್ಪುರಂನಲ್ಲಿ 34 ಪ್ರಕರಣಗಳು ದಾಖಲಾಗಿವೆ.

ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕೊಟ್ಟಾಯಂನಲ್ಲಿ 28 ಪ್ರಕರಣಗಳು ದಾಖಲಾಗಿದ್ದು 215 ಜನರನ್ನು ಬಂಧಿಸಲಾಗಿದೆ. ಕಣ್ಣೂರು ನಗರವೊಂದರಲ್ಲೇ 26 ಪ್ರಕರಣಗಳು ದಾಖಲಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments