Friday, November 22, 2024
Homeಯಕ್ಷಗಾನತಾಳಮದ್ದಳೆ ಸಪ್ತಾಹದ ಸಮಾರೋಪ ಮತ್ತು ಗೌರವಾರ್ಪಣೆ

ತಾಳಮದ್ದಳೆ ಸಪ್ತಾಹದ ಸಮಾರೋಪ ಮತ್ತು ಗೌರವಾರ್ಪಣೆ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನಾಳ ಸಹಯೋಗದಲ್ಲಿ ದಿನಾಂಕ 18/09/2022 ರಿಂದ ಆರಂಭವಾದ ಯಕ್ಷಗಾನ ತಾಳಮದ್ದಳೆಯ  7ನೇ ದಿನ ಮತ್ತು ಹಿರಿಯರ ಸಂಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುರೇಶ್ ಕುಮಾರ್ ಶೆಟ್ಟಿ ತುಂಬೆಜಾಲು ದೀಪ ಬೆಳಗಿಸಿ ಉದ್ಘಾಟಿಸಿದರು. 

ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಯಶಸ್ವಿಯಾಗಿ ಸಂಘಟಿಸಿರುವುದು ಕಲಾ ಪ್ರಸರಣದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯೆಂದು ತಿಳಿಸಿ ತನ್ನ ಯಕ್ಷಗಾನದ ಅನುಭವಗಳನ್ನು ಹಂಚಿಕೊಂಡರು.  ಸಪ್ತಾಹದ ಮಹಾ ಪೋಷಕರಾದ ಸುರೇಶ್ ಕುಮಾರ್ ಮತ್ತು ಅವರ ಪತ್ನಿ ಶ್ರೀಮತಿ ಶೋಭಾ ಶೆಟ್ಟಿ ನಿವೃತ್ತ ಮುಖ್ಯೋಪಾಧ್ಯಾಯರು,ಮಂಗಳೂರು ಇವರನ್ನು ಸಂಯೋಜಕರ ಪರವಾಗಿ ಗೌರವಿಸಲಾಯಿತು.

ಕೀರ್ತಿಶೇಷ ರುಕ್ಮಯ್ಯ ಆಚಾರ್ಯ ನಾಳ ಇವರ ಕಲಾ ಸೇವೆಯ ಬಗ್ಗೆ ದಿವಾಕರ್ ಆಚಾರ್ಯ ಗೇರುಕಟ್ಟೆ  ಸಂಸ್ಕರಣಾ ನುಡಿಗಳನ್ನಾಡಿದರು. ರುಕ್ಮಯ್ಯ ಆಚಾರ್ಯರ ಪುತ್ರ ಅಶೋಕ ಆಚಾರ್ಯ ನಾಳ ಇವರನ್ನು ಗೌರವಿಸಲಾಯಿತು. ಯಕ್ಷಗಾನ ತಾಳಮದ್ದಳೆಯ ಕಾರ್ಯಕ್ರಮಕ್ಕೆ ನೂತನ ಪೀಠೋಪಕರಣಗಳನ್ನು ದೇವಳಕ್ಕೆ ಸಮರ್ಪಿಸಿದ ಜಗನ್ನಾಥ ವಂಜರೆ ಇವರನ್ನು ಗೌರವಿಸಲಾಯಿತು.  

ಕಾರ್ಯಕ್ರಮದಲ್ಲಿ  ಬಂಟ್ವಾಳ ಭಾರತೀಯ ಜೀವ ವಿಮಾ ನಿಗಮ ಅಭಿವೃದ್ಧಿ ಅಧಿಕಾರಿಗಳಾದ ಮಧ್ವರಾಜ್, ದಿನೇಶ್.ಎಂ, ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯಾದವ ಗೌಡ ಮುದ್ದುಂಜ, ಕಚೇರಿ ಪ್ರಬಂಧಕರಾದ ಗಿರೀಶ್ ಶೆಟ್ಟಿ ನಾಳ, ಯಕ್ಷ ಭಾರತಿ ಬೆಳ್ತಂಗಡಿ ಸಂಸ್ಥೆಯ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ. ಜಿ,  ಗೇರುಕಟ್ಟೆ,  ಕಲಾಪೋಷಕ ಸಂಜೀವ ಅನುಗ್ರಹ ಪಾರೆಂಕಿ, ಕಲಾವಿದ-ಶಿಕ್ಷಕ ವಿಜಯಕುಮಾರ್ ಕೊಯ್ಯೂರು ಶುಭ ಹಾರೈಸಿದರು.

ತಾಳಮದ್ದಲೆ ಸಪ್ತಾಹದ ಸಂಯೋಜಕರಾದ ದಿವಾಕರ್ ಆಚಾರ್ಯ ಗೇರುಕಟ್ಟೆ ಮತ್ತು ಕರುಣಾಕರ ಶೆಟ್ಟಿ ಬೆಳ್ತಂಗಡಿ ಇವರನ್ನು ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜನಾರ್ಧನ ಪೂಜಾರಿ.ಎಂ, ಶ್ರೀಮತಿ ಅಂಬಾ ಆಳ್ವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯಾದವ್ ಗೌಡ, ಗಿರೀಶ್ ಶೆಟ್ಟಿ ನಾಳ ಗೌರವಿಸಿದರು.  ಸಪ್ತಾಹದ ಯಶಸ್ಸಿಗೆ ಸಹಕರಿಸಿದ ಪ್ರಾಯೋಜಕರನ್ನು ಮತ್ತು ಸಂಘ ಸಂಸ್ಥೆಗಳನ್ನು  ಸ್ಮರಿಸಲಾಯಿತು.

ಹರೀಶ್ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ರಾಜೇಶ್ ಪೆರ್ಮುಡ ವಂದಿಸಿದರು. ರಾಘವ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಜರಗಿದ “ಸುಧನ್ವ ಮೋಕ್ಷ” ತಾಳಮದ್ದಲೆಯಲ್ಲಿ ಭಾಗವತರಾಗಿ ರಮೇಶ್ ಭಟ್ ಪುತ್ತೂರು ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ, ಯೋಗೀಶ್ ಆಚಾರ್ಯ.ಕೆ, ಸತೀಶ ಆಚಾರ್ಯ ವೇಣೂರು, ಅರ್ಥದಾರಿಗಳಾಗಿ ಪೂಕಳ ಲಕ್ಷ್ಮೀನಾರಾಯಣ ಭಟ್, ಜಬ್ಬಾರ್ ಸಮೋ, ಗಣರಾಜ್ ಕುಂಬ್ಳೆ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಹರೀಶ್ ಆಚಾರ್ಯ ಬಾರ್ಯ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments