Saturday, January 18, 2025
Homeಯಕ್ಷಗಾನ"ಕಲಾಪ್ರಕಾರದೊಳಗಿನ ಭಿನ್ನಾಭಿಪ್ರಾಯ ಕೊನೆಯಾಗಬೇಕು"

“ಕಲಾಪ್ರಕಾರದೊಳಗಿನ ಭಿನ್ನಾಭಿಪ್ರಾಯ ಕೊನೆಯಾಗಬೇಕು”

ಭಾರತೀಯರೆಲ್ಲರೂ ಕಲೆಗಳ ಮೂಲಕ ಒಂದಾಗಬೇಕು. ಯಕ್ಷಗಾನ, ಭರತನಾಟ್ಯ, ಕೂಚುಪುಡಿ, ಕಥಕ್ಕಳಿ, ಒಡಿಸ್ಸಿ ಹೀಗೆ ಎಲ್ಲಾ ಪ್ರಕಾರಗಳು ಭಾರತದ್ದು, ಈ ಪ್ರಕಾರಗಳಿಗೆ ದೇಶ, ವಿದೇಶಗಳಲ್ಲಿ ಹೆಚ್ಚು ಮನ್ನಣೆ ದೊರೆತಿದೆ. ಆದರೆ ಇಲ್ಲಿ ನಾವು ಒಗ್ಗೂಡಿ ಕಲೆ ಎನ್ನುವುದು ಇನ್ನಷ್ಟು ದೊಡ್ಡ ಶಕ್ತಿಯಾಗಬೇಕು. ನಮ್ಮೊಳಗಿನ ಭಿನ್ನಾಭಿಪ್ರಾಯ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುದು.

ಇಲ್ಲಿ ಯಕ್ಷದೇಗುಲ ಸಂಸ್ಥೆ ದೇಗುಲವಾಗಿಯೇ ಉಳಿದಿದೆ. ಮಕ್ಕಳ ಮೂಲಕ ಬೆಳಗುತ್ತಿರುವ ಈ ಸಂಸ್ಥೆ ಸಂಪೂರ್ಣ ಕನ್ನಡದ್ದು, ಕನ್ನಡದ ಭಾವ ತುಂಬಿದ ಭಾವನೆಗೆ ಇತರ ಕಲಾ ಪ್ರಕಾರದ ಕಲಾದೃಷ್ಟಿಯೂ ಪ್ರೀತಿಯ ಭಾವ ತುಂಬಿ ಬೆಳಗಿಸಲಿ, ಬೆಳಗಲಿ ಎಂದು 25-09-2022 ರಂದು ಬೆಂಗಳೂರಿನ ಜಯನಗರದ ಯುವಕ ಸಂಘ ಸಭಾಂಗಣದಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ಯಕ್ಷದೇಗುಲ ಸಂಸ್ಥೆಯ ಸಂಯೋಜನೆಯ “ಬಾಲ ಯಕ್ಷೋತ್ಸವ”ದ ಉದ್ಘಾಟನೆಯನ್ನು ಕೃಷ್ಣನಿಗೆ ಚಕ್ರ ನೀಡುವ ಮೂಲಕ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಹಿರಿಯ ಸಹೋದ್ಯೋಗಿ ಡಾ. ಅಶ್ವಥ್ ಹರಿತಾಸ್ ರವರು ಚಾಲನೆ ನೀಡಿ ಮಾತನಾಡಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆ. ಎಮ್. ಶೇಖರ್ ರವರು ಮಾತನಾಡಿ ಯಕ್ಷಗಾನವನ್ನು ಮಕ್ಕಳಿಗೆ ಕಲಿಸುವುದರ ಮೂಲಕ ಕಲಾತ್ಮಕವಾದ ಒಂದು ಸುಂದರ ಸಮಾಜವನ್ನು ರೂಪುಗೊಳಿಸುವಲ್ಲಿ ಯಕ್ಷದೇಗುಲ ಕಂಕಣಬದ್ದವಾಗಿದೆ.

ದೇಶದ ಸತ್ಪ್ರಜೆಗಳಾಗಿ, ಅನರ್ಘ್ಯ ರತ್ನಗಳಾಗಿ, ಮುಂದಿನ ದಿನಗಳಲ್ಲಿ ಭಾರತವನ್ನು ಬೆಳಗಬೇಕಾದವರು ಮುದ್ದುಮಕ್ಕಳು. ಅಂತಹ ಮಕ್ಕಳಿಗೆ ಯಕ್ಷಗಾನದ ಮೂಲಕ ಸಂಸ್ಕೃತಿಯನ್ನು ಧಾರೆಯೆರೆಯುತ್ತಿರುವ ಯಕ್ಷದೇಗುಲ ನಾಲ್ಕು ದಶಕಗಳಿಂದಲೂ ಅವಿರತ ಕಾಯಕದಿಂದ ಬೆಳೆದು ಬಂದಿದೆ. ಬೆಂಗಳೂರಿನ0ತಹ ಮಹಾನಗರದಲ್ಲಿ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಬಹಳ ಶ್ರದ್ಧೆಯಿಂದ ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡ ಸಂಸ್ಥೆ ಯಕ್ಷದೇಗುಲ ಎಂದರು.


ವೇದಿಕೆಯಲ್ಲಿ ತುಳು ಅಕಾಡೆಮಿಯ ಸದಸ್ಯೆ ಕಾಂತಿ ಶೆಟ್ಟಿ, ಉದಯ ಭಾನು ಕಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಸುಗುಣ ಎಸ್, ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಮತ್ತು ಯಕ್ಷದೇಗುಲ ಕಾರ್ಯದರ್ಶಿ ಕೆ. ಮೋಹನ್ ಉಪಸ್ಥಿತರಿದ್ದರು.


ಯಕ್ಷದೇಗುಲದ ಬಾಲಕೃಷ್ಣ ಭಟ್‌ರು ಪ್ರಾಸ್ತಾವಿಕ ಮಾತನಾಡಿದರು. ಕೆ. ಮೋಹನ್ ವಂದಿಸಿದರು. ಕಾರ್ಯಕ್ರಮವನ್ನು ವಿಶ್ವನಾಥ್ ಉರಾಳ್ ನಿರೂಪಿಸಿದರು.


ನಂತರ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ “ಬಾಲ ಯಕ್ಷೋತ್ಸವ” ನಡೆಯಿತು. ಕೆ. ಮೋಹನ್ ನಿರ್ದೇಶನದಲ್ಲಿ ಪ್ರಿಯಾಂಕ ಕೆ. ಮೋಹನ್, ಸುದರ್ಶನ ಉರಾಳರ ಗುರುತನದಲ್ಲಿ, ಕೂಡ್ಲಿ ದೇವದಾಸ್, ಕೋಟ ಶಿವಾನಂದ, ಲಂಬೋದರ ಹೆಗಡೆಯವರ ಹಿಮ್ಮೇಳದಲ್ಲಿ 30 ಮಕ್ಕಳ “ಬಾಲಯಕ್ಷೋತ್ಸವ” ಸಂಪನ್ನಗೊoಡಿತು.

ಕೋಟ ಸುದರ್ಶನ ಉರಾಳ
ಮೊ. 9448547237

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments