ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನದಲ್ಲಿ ಕೀರ್ತಿಶೇಷ ಕಲಾವಿದರಾದ ಮೆದಿನ ಕೊರಗಪ್ಪ ಪೂಜಾರಿ ಅವರ ಸಂಸ್ಮರಣ ಕಾರ್ಯಕ್ರಮವನ್ನು ಮಾರುತಿಪುರ ರೈತ ಬಂದು ಮಾಲಕರಾದ ಶಿವಶಂಕರ್ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ ತಾಳಮದ್ದಲೆ ಸಪ್ತಾಹದೊಂದಿಗೆ ಊರಿನ ಕೀರ್ತಿಶೇಷ ಕಲಾವಿದರನ್ನು ಸ್ಮರಿಸುವುದು ಉತ್ತಮ ಕಾರ್ಯವೆಂದು ತಿಳಿಸಿದರು.
ನಾಳದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಂಬಾ ಆಳ್ವ, ದಿನೇಶ ಗೌಡ ಕಲಾಯಿತೊಟ್ಟು , ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ ರಾವ್ ನಾಳ, ಶ್ರೀ ಬನಶಂಕರಿ ಯಕ್ಷಗಾನ ಕಲಾತಂಡ ಪಣೆಜಾಲು ಅಧ್ಯಕ್ಷರಾದ ಶಿವಾನಂದ ಭಂಡಾರಿ , ಮೆದಿನ ಶ್ರೀಧರ ಪೂಜಾರಿ ಉಪಸ್ಥಿತರಿದ್ದರು.


ಸಂಸ್ಮರಣೆ ಅಂಗವಾಗಿ ಮೆದಿನ ರಾಘವ ಪೂಜಾರಿ ಇವರನ್ನು ಗೌರವಿಸಲಾಯಿತು. ಕರುಣಾಕರ ಶೆಟ್ಟಿ ಬೆಳ್ತಂಗಡಿ ಸ್ವಾಗತಿಸಿ ದಿವಾಕರ್ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆ ಗೈದರು. ರಾಜೇಶ್ ಪೆರ್ಮುಡ ವಂದಿಸಿದರು.
ಬಳಿಕ ಜರಗಿದ ತಾಳಮದ್ದಲೆಯಲ್ಲಿ ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಚಂದ್ರಶೇಖರ ಆಚಾರ್ಯ ವೆಂಕಟೇಶ ಮೂರ್ಜೆ ಅರ್ಥದಾರಿಗಳಾಗಿ ಸುಬ್ರಾಯ ಹೊಳ್ಳ ಕಾಸರಗೋಡು, ರಾಘವೇಂದ್ರ ಆಸ್ರಣ್ಣ, ರವಿರಾಜ ಪನೆಯಾಲ, ದಿವಾಕರ್ ಆಚಾರ್ಯ ಗೇರುಕಟ್ಟೆ, ರಾಘವ. ಹೆಚ್ ಭಾಗವಹಿಸಿದ್ದರು.
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ತಾಳಮದ್ದಳೆ ಸಪ್ತಾಹದ ಆರನೇ ದಿನದ ಕಾರ್ಯಕ್ರಮವನ್ನು ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ದೀಪ ಬೆಳಗಿಸಿ ಉದ್ಘಾಟಿಸಿ ಕಲಾ ಕಾರ್ಯಕ್ರಮಗಳಿಗೆ ಸರ್ವರ ಪ್ರೋತ್ಸಾಹ ಅತ್ಯಗತ್ಯ. ಕೀರ್ತಿಶೇಷರಾದ ಕಲಾವಿದರ ಕೊಡುಗೆಗಳನ್ನು ಸ್ಮರಿಸುವುದರ ಮೂಲಕ ಕಲೆಯ ಬೆಳವಣಿಗೆಗೆ ಪ್ರೇರಣೆ ನೀಡುತ್ತದೆ ಎಂದು ಅವರು ತಿಳಿಸಿದರು.
ಕೀರ್ತಿಶೇಷ ಕಿಟ್ಟಣ್ಣ ಶೆಟ್ಟಿ ರಾಯಿಮಾರು ಇವರ ಸಂಸ್ಮರಣೆಯ ಅಂಗವಾಗಿ ಅವರ ಪುತ್ರ ಶ್ರೀನಿವಾಸ ಶೆಟ್ಟಿ ಇವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ವಿಜಯ ಪ್ರಸಾದ್, ತುಕಾರಾಮ ಪೂಜಾರಿ.ಎಂ ಗೇರುಕಟ್ಟೆ , ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಶೇಖರ ನಾಯ್ಕ್ , ಆರ್.ಎನ್ ಸುರೇಶ್ ಕುಮಾರ್, ಕೊಂಕಣ ರೈಲ್ವೆಯ ಆರ್.ಎನ್ ಸತೀಶ್ ಕುಮಾರ್ ಗೇರುಕಟ್ಟೆ, ವಸಂತ ಶೆಟ್ಟಿ ರಾಯಿಮಾರು, ಕೆ.ಎನ್ ಸುಧೀರ್ ಕುಮಾರ್ ಹಲೇಜಿ, ಕಚೇರಿ ಪ್ರಬಂಧಕ ಗಿರೀಶ್ ನಾಳ ಉಪಸ್ಥಿತರಿದ್ದರು.
ದಿವಾಕರ್ ಆಚಾರ್ಯ ಗೇರುಕಟ್ಟೆ ಸಂಸ್ಮರಣ ನುಡಿಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕರಾದ ಕರುಣಾಕರ ಶೆಟ್ಟಿ ಬೆಳ್ತಂಗಡಿ ಸ್ವಾಗತಿಸಿ ರಾಘವ ಗೇರುಕಟ್ಟೆ ವಂದಿಸಿದರು. ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಜರಗಿದ ರುಕ್ಮಾಂಗದ ಚರಿತ್ರೆ ತಾಳಮದ್ದಲೆಯಲ್ಲಿ ಭಾಗವತರಾಗಿ ಶ್ರೀನಿವಾಸಗೌಡ ಬಳ್ಳಮಂಜ, ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವೆಂಕಟೇಶ್ ಮೂರ್ಜೆ ಅರ್ಥದಾರಿಗಳಾಗಿ ಸುಣ್ಣoಬ್ಬಳ ವಿಶ್ವೇಶ್ವರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ರವಿರಾಜ ಪನೆಯಾಲ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ದಿವಾಕರ ಆಚಾರ್ಯ ನೇರೆಂಕಿ ಭಾಗವಹಿಸಿದ್ದರು.

