ಮಂಗಳೂರು ಸೇರಿದಂತೆ ಇಂದು ದೇಶಾದ್ಯಂತ ಎಸ್‌ಡಿಪಿಐ (SDPI) ಮತ್ತು ಪಿಎಫ್‌ಐ(PFI) ಕಚೇರಿಗಳ ಮೇಲೆ ಎನ್‌ಐಎ (NIA) ಮಿಂಚಿನ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿ ಕೆಲವರನ್ನು ಬಂಧಿಸಿದೆ ಎಂದು ವರದಿಯಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಈ ಕುರಿತು ಪ್ರಶ್ನೆ ಕೇಳಲಾಯಿತು.
ಪಿಎಫ್‌ಐ ಕಚೇರಿಗಳು ಮತ್ತು ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಿರುವ ಕುರಿತು ಕೇಳಲಾದ ಪ್ರಶ್ನೆಗೆ, “ಎಲ್ಲಾ ರೀತಿಯ ಕೋಮುವಾದ ಮತ್ತು ಹಿಂಸಾಚಾರಗಳು ಎಲ್ಲಿಂದ ಬಂದರೂ ಒಂದೇ ಆಗಿರುತ್ತವೆ ಮತ್ತು ಹೋರಾಡಬೇಕು. ಶೂನ್ಯ ಸಹಿಷ್ಣುತೆ ಇರಬೇಕು” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದರು.
ಪಿಎಫ್‌ಐ ಕಚೇರಿಗಳು ಮತ್ತು ಅದರ ನಾಯಕರ ಮೇಲೆ ಎನ್‌ಐಎ ದಾಳಿ ಕುರಿತಾದ ಪ್ರಶ್ನೆಗೆ ರಾಹುಲ್ ಗಾಂಧಿ ಹೀಗೆ ಹೇಳುವ ಮೂಲಕ ಪರೋಕ್ಷವಾಗಿ ಎನ್‌ಐಎ ದಾಳಿಯನ್ನು ಬೆಂಬಲಿಸಿದ್ದಾರೆ.