ಉಡುಪಿ: ಇನ್ನಂಜೆ ಸಮೀಪದ ಬಲಟ್ಟಮನೆ ದಿ. ಗುಂಡು ಶೆಟ್ಟರ ಧರ್ಮಪತ್ನಿ ಶ್ರೀಮತಿ ಕಲ್ಯಾಣಿ ಶೆಟ್ಟಿ(88) ದಿನಾಂಕ 19-09-22 ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಧಾರ್ಮಿಕ ಮನೋಭಾವದ, ಸದ್ಗುಣ ಸಂಪನ್ನರಾಗಿದ್ದ ಇವರು ಮಾಜಿ ಲಯನ್ ಗವರ್ನರ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಶ್ರೀ ವಿ.ಜಿ.ಶೆಟ್ಟಿ ಸೇರಿದಂತೆ ಏಳು ಜನ ಪುತ್ರರು ಮೂವರು ಪುತ್ರಿಯರು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗ0ಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.