ಕರ್ನಾಟಕ ಸಾಹಿತ್ಯ ಅಕಾಡಮಿ ಬೆಂಗಳೂರು ಸದಸ್ಯರಾಗಿ ನಿಯುಕ್ತರಾದ ಉಪನ್ಯಾಸಕ-ಕಲಾವಿದ ಮತ್ತು ಸಂಘಟಕರಾದ ಕೇಶವ ಬಂಗೇರ ಗೇರುಕಟ್ಟೆ ಇವರನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಮಂಗಳೂರು ಯಕ್ಷಾಂಗಣದ ಸಂಚಾಲಕರು ಮತ್ತು ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಕೇಶವ ಬಂಗೇರರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಭುವನೇಶ ಗೇರುಕಟ್ಟೆ, ಸದಸ್ಯರಾದ ಶ್ರೀಮತಿ ಅಂಬಾ ಆಳ್ವ, ಸಪ್ತಾಹ ಸಂಯೋಜಕರಾದ ಕರುಣಾಕರ ಶೆಟ್ಟಿ ಬೆಳ್ತಂಗಡಿ, ವಿಠಲ ಶೆಟ್ಟಿ ಉಪ್ಪಡ್ಕ, ಪಿ.ಸಿ ಮೂಲ್ಯ, ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು.
ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.