ಇಂದು ಪುತ್ತೂರಿನಲ್ಲಿ ಯಕ್ಷತ್ರಯ ಸಮಾರೋಪ, ಕೀರ್ತಿಶೇಷ ಪದ್ಯಾಣ ಗಣಪತಿ ಭಟ್ ಮತ್ತು ಕೀರ್ತಿಶೇಷ ಪುತ್ತೂರು ಶ್ರೀಧರ ಭಂಡಾರಿ ಸ್ಮೃತಿ ಗೌರವ, “ಶ್ರೀ ದೇವಿ ಚರಿತೆ” ಎಂಬ ಯಕ್ಷಗಾನ ಪ್ರದರ್ಶನ
ಪುತ್ತೂರಿನಲ್ಲಿ ಯಕ್ಷೋತ್ಸವ ನಡೆಯುತ್ತಿದ್ದು, “ಯಕ್ಷತ್ರಯ” (ಮೂರು ದಿನಗಳ ಯಕ್ಷಜಾತ್ರೆ) ಶ್ರೀ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಪ್ರದರ್ಶನ ಸಮಾರೋಪ ಇಂದು ನಡೆಯಲಿದೆ.
ಇಂದು ಕೀರ್ತಿಶೇಷ ಪದ್ಯಾಣ ಗಣಪತಿ ಭಟ್ ಮತ್ತು ಕೀರ್ತಿಶೇಷ ಪುತ್ತೂರು ಶ್ರೀಧರ ಭಂಡಾರಿ ಸ್ಮೃತಿ ಗೌರವ ನಡೆಯಲಿದೆ.
ಅನಂತರ ಶ್ರೀ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ “ಶ್ರೀ ದೇವಿ ಚರಿತೆ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಿವರಗಳಿಗೆ ಕರಪತ್ರ ನೋಡಿ
