Saturday, November 23, 2024
Homeಸುದ್ದಿದೇವರ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನ ಕುಟುಂಬಕ್ಕೆ 60,000 ರೂ.ದಂಡ ವಿಧಿಸಿದ ಗ್ರಾಮಸ್ಥರು! ಕೊಪ್ಪಳದಲ್ಲೊಂದು ಹೇಯ,...

ದೇವರ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನ ಕುಟುಂಬಕ್ಕೆ 60,000 ರೂ.ದಂಡ ವಿಧಿಸಿದ ಗ್ರಾಮಸ್ಥರು! ಕೊಪ್ಪಳದಲ್ಲೊಂದು ಹೇಯ, ಆಘಾತಕಾರಿ ಕೃತ್ಯ  

ಕೊಪ್ಪಳ ಜಿಲ್ಲೆಯಲ್ಲಿ  ದೇವರ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನ ಕುಟುಂಬಕ್ಕೆ ಗ್ರಾಮಸ್ಥರು 60,000 ರೂ.ದಂಡ ವಿಧಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ದಲಿತ ಕುಟುಂಬವೊಂದು ದೇವಸ್ಥಾನದ ದೇವರ ವಿಗ್ರಹವನ್ನು ಮುಟ್ಟಿದ ಆರೋಪದ ಮೇಲೆ 60,000 ರೂ. ದಂಡ ವಿಧಿಸಿದ ಆಘಾತಕಾರಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಾಲೂರು ತಾಲೂಕಿನ ಹುಲ್ಲೇರಹಳ್ಳಿ ಗ್ರಾಮದಲ್ಲಿರುವ ವಿಗ್ರಹವನ್ನು ಮೆರವಣಿಗೆಗೆ ಕೊಂಡೊಯ್ಯುವ ಮುನ್ನ ದಲಿತ ಬಾಲಕ ಸ್ಪರ್ಶಿಸಿದ್ದಾನೆ ಎಂದು ಸ್ಥಳೀಯ ಮೂಲಗಳು ಹೇಳಿವೆ.

ಚೇತನ್ ಮೂರು ದಿನಗಳ ಹಿಂದೆ ಆಚರಣೆಯ ಸಂದರ್ಭದಲ್ಲಿ ವಿಗ್ರಹವನ್ನು ಸ್ಪರ್ಶಿಸಿ ಅದನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಪ್ರಯತ್ನ ಮಾಡಿದರು. ನಂತರ ಗ್ರಾಮಸ್ಥರು ಆತನನ್ನು ದಾರಿಯಿಂದ ತಳ್ಳಿ ಕುಟುಂಬಕ್ಕೆ 60 ಸಾವಿರ ರೂ.ದಂಡ ಹಾಕಿದರು.

ದಲಿತ ಬಾಲಕ ರಮೇಶ್ ಮತ್ತು ಶೋಭಾ ಅವರ ಪೋಷಕರು ದಂಡ ಪಾವತಿಸುವವರೆಗೆ ಗ್ರಾಮಕ್ಕೆ ಪ್ರವೇಶಿಸದಂತೆ ಗ್ರಾಮದ ಹಿರಿಯರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ  8 ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಆದರೆ ಗ್ರಾಮಸ್ಥರು ಈ ಎಲ್ಲಾ  ಆರೋಪಗಳನ್ನು ನಿರಾಕರಿಸಿದ್ದಾರೆ. ಇದು ಕೇವಲ ಕಪೋಲಕಲ್ಪಿತ ಕಥೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments