Sunday, January 19, 2025
Homeಯಕ್ಷಗಾನತಾಳಮದ್ದಳೆ ಸಪ್ತಾಹದಲ್ಲಿ ಗೇರುಕಟ್ಟೆ ಮೋನಪ್ಪ ಆಚಾರ್ಯ, ಕುಂಟಿನಿ ನಾರಾಯಣ ಭಾಂಗಿಣ್ಣಾಯ ಸಂಸ್ಮರಣೆ

ತಾಳಮದ್ದಳೆ ಸಪ್ತಾಹದಲ್ಲಿ ಗೇರುಕಟ್ಟೆ ಮೋನಪ್ಪ ಆಚಾರ್ಯ, ಕುಂಟಿನಿ ನಾರಾಯಣ ಭಾಂಗಿಣ್ಣಾಯ ಸಂಸ್ಮರಣೆ

19.09.2022 –

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಜರಗುತ್ತಿರುವ ತಾಳಮದ್ದಳೆ ಸಪ್ತಾಹದ ಎರಡನೇ ದಿನದಂದು ಕೀರ್ತಿಶೇಷ ಮೋನಪ್ಪ ಆಚಾರ್ಯ ಗೇರುಕಟ್ಟೆ ಇವರ ಸಂಸ್ಮರಣೆ ಕಾರ್ಯಕ್ರಮಕ್ಕೆ ಡಾ. ಅನಂತ ಭಟ್ ಜ್ಯೋತಿ ಕ್ಲಿನಿಕ್ ಗೇರುಕಟ್ಟೆ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಳಿಯ  ಗ್ರಾಮ ಪಂಚಾಯತ್ ಸದಸ್ಯ ಯಶೋದರ ಶೆಟ್ಟಿ ಮಾಣಿಕ್ಯ, ಸೌಹಾರ್ದ ಯಕ್ಷಗಾನ ಸಮಿತಿ ರಾಮನಗರ ಅಧ್ಯಕ್ಷರಾದ ಉಮೇಶ ಶೆಣೈ. ಎನ್, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ .ಎಂ, ಕಲಾವಿದ ಜಬ್ಬಾರ್ ಸಮೋ, ಬೆಳ್ತಂಗಡಿ ಸಹಕಾರಿ ಭಾರತಿ ಅಧ್ಯಕ್ಷರಾದ ರಾಜೇಶ್ ಪೆರ್ಮುಡ, ಕಿಶೋರ್ ಶೆಟ್ಟಿ ಮೂಡಾಯಿರು, ಆನಂದ ಶೆಟ್ಟಿ ಐಸಿರಿ ಪನೆಜಾಲು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕೀರ್ತಿ ಶೇಷ ಮೋನಪ್ಪ ಆಚಾರ್ಯ ಗೇರುಕಟ್ಟೆ ಸಂಸ್ಮರಣೆಯ ಅಂಗವಾಗಿ ಅವರ ಮೊಮ್ಮಗ ಸನತ್. ಡಿ ಇವರನ್ನು ಗೌರವಿಸಲಾಯಿತು.ಕರುಣಾಕರ ಶೆಟ್ಟಿ, ಬೆಳ್ತಂಗಡಿ ಸ್ವಾಗತಿಸಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ತಾಳಮದ್ದಳೆ ಸಪ್ತಾಹದ ಸಂಯೋಜಕರಾದ ಕರುಣಾಕರ ಶೆಟ್ಟಿ ಬೆಳ್ತಂಗಡಿ ಗಣ್ಯರನ್ನು ಸ್ವಾಗತಿಸಿದರು. ಶ್ರೀಮತಿ ವಾಣಿ ಹರೀಶ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ದಿವಾಕರ್ ಆಚಾರ್ಯ ಗೇರುಕಟ್ಟೆ ವಂದಿಸಿದರು.

ಬಳಿಕ ಜರಗಿದ ಅತಿಕಾಯ ಮೋಕ್ಷ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಮಹೇಶ್ ಕನ್ಯಾಡಿ, ಚಂದ್ರಶೇಖರ ಗುರುವಾಯನಕೆರೆ, ವೆಂಕಟೇಶ ಮೂರ್ಜೆ ಅರ್ಥದಾರಿಗಳಾಗಿ  ಜಬ್ಬಾರ್ ಸಮೊ, ತಾರನಾಥ ವರ್ಕಾಡಿ, ಗುಂಡ್ಯಡ್ಕ ಈಶ್ವರ ಭಟ್, ಗೋಪಾಲ ಶೆಟ್ಟಿ ಕಳೆಂಜ, ದಿವಾಕರ ಗೇರುಕಟ್ಟೆ ಭಾಗವಹಿಸಿದ್ದರು.

20.09.2022 –

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗುತ್ತಿರುವ ತಾಳಮದ್ದಳೆ ಸಪ್ತಾಹದಲ್ಲಿ ಕೀರ್ತಿ ಶೇಷ ಕುಂಟಿನಿ ನಾರಾಯಣ ಭಾಂಗಿಣ್ಣಾಯ ಸಂಸ್ಮರಣೆ ಕಾರ್ಯಕ್ರಮವನ್ನು ಬದ್ಯಾರು ಹಂಸಗಿರಿ ರೈಸ್ ಮಿಲ್ ಮಾಲಕರಾದ ಬಾಲಕೃಷ್ಣ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಅತಿಥಿಗಳಾಗಿ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ, ಭಜನಾ ಮಂಡಳಿಯ ಅಧ್ಯಕ್ಷರಾದ ಉಮೇಶ ಶೆಟ್ಟಿ  ಸಂಬೋಳ್ಯ, ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ ಕೇಳ್ದಡ್ಕ, ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ನಾಳ ಹಾಲು ಉತ್ಪಾಕರ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಮಜಲು, ಕೃಷ್ಣ ಕೋಟೆ ಉಪ್ಪಿನಂಗಡಿ  ಶುಭ ಹಾರೈಸಿದರು.

ಸಂಸ್ಮರಣೆಯ ಅಂಗವಾಗಿ ಕುಂಟಿನಿ ನಾರಾಯಣ ಭಟ್ಟರ ಸುಪುತ್ರ ಸುದರ್ಶನ್ ಭಟ್ ಇವರನ್ನು ಗೌರವಿಸಲಾಯಿತು.ಸಪ್ತಾಹದ ಸಂಯೋಜಕರಾದ ಕರುಣಾಕರ ಶೆಟ್ಟಿ ಬೆಳ್ತಂಗಡಿ ಸ್ವಾಗತಿಸಿದರು. ದಿವಾಕರ್ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ರಾಜೇಶ್ ಪೆರ್ಮುಡ  ವಂದಿಸಿದರು.

ನಂತರ ನಡೆದ  ಭೀಷ್ಮ ಪ್ರತಿಜ್ಞೆ  ತಾಳಮದ್ದಳೆಯ ಹಿಮ್ಮೇಳದಲ್ಲಿ ಕೆ.ಜೆ ಗಣೇಶ, ಕೆ.ಜೆ ಕೃಷ್ಣ , ಕೆ.ಜೆ ಸುಧೀಂದ್ರ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಭಾಸ್ಕರ ರೈ ಕುಕ್ಕುವಳ್ಳಿ, ಕರುಣಾಕರ ಶೆಟ್ಟಿ ಬೆಳ್ತಂಗಡಿ ಮತ್ತು  ಡಾ.ವೈಕುಂಠ ಹೇರ್ಳೆ  ಪಾರಂಪಳ್ಳಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments