ಬೆಳ್ತಂಗಡಿ ತಾಲೂಕಿನ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಳಮದ್ದಳೆ ಸಪ್ತಾಹಕ್ಕೆ ಚಾಲನೆ.
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಯಕ್ಷಾಭಿಮಾನಿಗಳು ಗೇರುಕಟ್ಟೆ – ನಾಳ ಸಂಯೋಜನೆಯಲ್ಲಿ ದಿನಾಂಕ 18 .9. 2022 ರಂದು ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಜ್ಯೋತಿ ಪ್ರಜ್ವಲಿಸುವ ಮೂಲಕ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು ಉದ್ಘಾಟಿಸಿದರು.
ಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಭುವನೇಶ ಗೇರುಕಟ್ಟೆ, ಬೆಳ್ತಂಗಡಿ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಂ .ವಿಶ್ವೇಶ್ವರ ಶೆಟ್ಟಿ ಶುಭ ಹಾರೈಸಿದರು.
ಕೀರ್ತಿಶೇಷ ನಾಳ ಕೃಷ್ಣಯ್ಯ ಮಾಸ್ಟರ್ ಮತ್ತು ಎನ್. ಆರ್ . ಸಂಪಿಗೆತ್ತಾಯ ಸಂಸ್ಮರಣೆಯನ್ನು ಮಾಡಲಾಯಿತು.ಶ್ರೀಕೃಷ್ಣಯ್ಯ ಮಾಸ್ಟರ್ ಅವರ ಮೊಮ್ಮಗ ಬಿ. ಗುಂಡೂರಾವ್, ನಾಳ ಹೊಸಮನೆ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಸಂಯೋಜಕರಾದ ಕರುಣಾಕರ ಶೆಟ್ಟಿ ಬೆಳ್ತಂಗಡಿ ಸ್ವಾಗತಿಸಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಾಣಿ ಹರೀಶ್ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ರಾಜೇಶ್ ಪೆರ್ಮುಡ ವಂದಿಸಿದರು.
ಬಳಿಕ ಜರಗಿದ ಪಟ್ಟಾಭಿಷೇಕ ತಾಳಮದ್ದಳಿಯಲ್ಲಿ ಪ್ರಶಾಂತ್ ರೈ ಪಂಜ, ಚಂದ್ರಶೇಖರ್ ಆಚಾರ್ಯ, ವೆಂಕಟೇಶ್ ಮೂರ್ಜೆ, ಸತೀಶ್ ವೇಣೂರು ಹಿಮ್ಮೇಳದಲ್ಲಿ ಮತ್ತು ಅರ್ಥಧಾರಿಗಳಾಗಿ ಶಂಭುಶರ್ಮ , ಪೂಕಳ ಲಕ್ಷ್ಮಿ ನಾರಾಯಣ ಭಟ್ , ಕರುಣಾಕರ ಶೆಟ್ಟಿ, ಬೆಳ್ತಂಗಡಿ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ರಾಘವ . ಯೆಚ್ ಭಾಗವಹಿಸಿದ್ದರು.

- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
