Saturday, January 18, 2025
Homeಸುದ್ದಿ"ಕೃಷಿಕೋದ್ಯಮ" - ಕೃಷಿ ಬದುಕಿನ ಪಯಣದಲ್ಲಿ ಹೊಸತನದ ಹೆಜ್ಜೆ: ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ವಿನೂತನ ಸಮಾಜಮುಖಿ...

“ಕೃಷಿಕೋದ್ಯಮ” – ಕೃಷಿ ಬದುಕಿನ ಪಯಣದಲ್ಲಿ ಹೊಸತನದ ಹೆಜ್ಜೆ: ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ವಿನೂತನ ಸಮಾಜಮುಖಿ ಕಾರ್ಯಕ್ರಮ 

ಪುತ್ತೂರಿನ ಮುಳಿಯ ಕೇಶವ ಭಟ್ ಅಂಡ್ ಸನ್ಸ್ ಜ್ಯುವೆಲ್ಲರ್ಸ್ ಸದಾ ಒಂದಲ್ಲ ಒಂದು ವಿನೂತನ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಎತ್ತಿದ ಕೈ. ಮುಳಿಯದಲ್ಲಿ ಈ ಬಾರಿಯೂ ಅಂತಹುದೇ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ 20.09.2022ನೇ ಮಂಗಳವಾರದಂದು ಮುಳಿಯ ಸಂಸ್ಥೆಯು “ಕೃಷಿಕೋದ್ಯಮ” ಎಂಬ ಕೃಷಿಸಂಬಂಧವಾದ ಸಂವಾದ ಕಾರ್ಯಕ್ರಮ ಮುಳಿಯ ನೇತೃತ್ವದಲ್ಲಿ, ಸುದ್ದಿ ಪತ್ರಿಕೆಯ ಸಹಭಾಗಿತ್ವದಲ್ಲಿ ನಡೆಯಲಿದೆ.

ಆ ದಿನ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮ ಮಧ್ಯಾಹ್ನ 2 ಘಂಟೆಯವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಪರಿಣಿತರು ಭಾಗವಹಿಸಲಿದ್ದಾರೆ. 

ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಹೆಸರನ್ನು ನೊಂದಾಯಿಸಬೇಕೆಂದು ಮುಳಿಯದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮದ ಕರಪತ್ರವನ್ನು ನೋಡಿ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments