Saturday, January 18, 2025
Homeಯಕ್ಷಗಾನ“ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ" ಇದುವರೆಗೆ ನಡೆಸಿದ ಕಾರ್ಯಚಟುವಟಿಕೆಗಳು - ಒಂದು ಸಿಂಹಾವಲೋಕನ

“ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ” ಇದುವರೆಗೆ ನಡೆಸಿದ ಕಾರ್ಯಚಟುವಟಿಕೆಗಳು – ಒಂದು ಸಿಂಹಾವಲೋಕನ

ಸಿರಿಬಾಗಿಲು ವೆಂಕಪ್ಪಯ್ಯರವರು ನಾಲ್ಕು ದಶಕಗಳ ಹಿಂದಿನ  ಗಡಿನಾಡಿನ ಶ್ರೇಷ್ಠ  ಕವಿ, ವಿಮರ್ಶಕ ಹಾಗೂ ಲೇಖಕರು . ಕನ್ನಡ ಭಾಷೆಗೆ ಹೊಸ ಕಸುವನ್ನು ಕೊಟ್ಟವರು . ವೆಂಕಪ್ಪಯ್ಯರವರು ಕುಂಬಳೆ ಅರಸೊತ್ತಿಗೆಯ ಬಗ್ಗೆ, ತುಳುನಾಡ ಕೇಸರಿ ಜಯಸಿಂಹನ ಬಗ್ಗೆ, ಯಕ್ಷಗಾನದ ವಾಲ್ಮೀಕಿ ಎನಿಸಿದ ಪಾರ್ತಿಸುಬ್ಬನ ಬಗ್ಗೆ, ಮಾಯಿಪ್ಪಾಡಿ ಅರಮನೆಯ ಜಟ್ಟಿ ಪುಳ್ಕೂರು ಬಾಚನ ಬಗ್ಗೆ  ಮೌಲ್ಯಯುತವಾದ ಲೇಖನ ಸಹಿತ ನೂರಾರು ಕೃತಿಗಳನ್ನು ಕುರಿತು ಬರೆದಿದ್ದಾರೆ. ಅವರ ಹೆಚ್ಚಿನ ಕೃತಿಗಳನ್ನು ಕೇರಳ ಸರಕಾರದ ಶಿಕ್ಷಣ ಇಲಾಖೆಯು ಉಪಪಠ್ಯವನ್ನಾಗಿಸಿದೆ.

ಇಂತಹ ಮಹಾನ್ ಕಲಾವಿದರ ಹೆಸರು ಚಿರಸ್ಥಾಯಿಯಾಗಿ ಉಳಿಯಲು “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ” ಎಂಬ ಸಂಸ್ಥೆಯು ಕಾರ್ಯರೂಪಕ್ಕೆ ಬಂದಿದೆ. ಹಾಗಾದರೆ  “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ” ಇದುವರೆಗೆ ನಡೆಸಿದ ಕಾರ್ಯಚಟುವಟಿಕೆಗಳೇನು ಎಂಬುದನ್ನು ತಿಳಿಯೋಣ. 

2013 ರಲ್ಲಿ ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವೆಂಬ ನಾಮಧೇಯದಲ್ಲಿ ಟ್ರಸ್ಟ್ ಆಕ್ಟ್ ಪ್ರಕಾರ ನೊಂದಾವಣೆ. ಉದ್ದೇಶ- ಯಕ್ಷಗಾನ ಇನ್ನಿತರ ಕಲಾ ಪ್ರಾಕಾರಗಳ ಪಾಂರಂಪರಿಕ ಸೊಬಗಿನ ಉಳಿವಿಗಾಗಿ ಪ್ರಯತ್ನ, ತರಗತಿ- ಜಾಗೃತಿ- ಇತ್ಯಾದಿ.

ಇದುವರೆಗೆ ನಡೆಸಿದ ಕಾರ್ಯಕ್ರಮಗಳು 

*ಸಿರಿಬಾಗಿಲು ವೆಂಕಪಯ್ಯ ಸ್ಮಾರಕ ಪ್ರಶಸ್ತಿ ( ಇದುವರೆಗೆ 12 ಗಣ್ಯರಿಗೆ ಪ್ರಧಾನ)

* ಸಿರಿಬಾಗಿಲು ಕೃತಿ ಸಂಪುಟ- ಸಿರಿಮೊಗ ಸ್ಮರಣ ಸಂಚಿಕೆ ಬಿಡುಗಡೆ 

*ಕರ್ನಾಟಕ- ಕೇರಳದಾದ್ಯಂತ 200 ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮ 

*ಯುವ ಪ್ರತಿಭೆಗಳು ಪ್ರೋತ್ಸಾಹಕ್ಕಾಗಿ 2 ಕವನ ಸಂಕಲನ ಪ್ತತಿಷ್ಠಾನದ ಪ್ರಕಾಶನದಿಂದ ಪ್ರಕಟ.

*ಕರ್ನಾಟಕ- ಕೇರಳದಾದ್ಯಂತ ತೆಂಕುತಿಟ್ಟು ಯಕ್ಷಗಾನ ಪೂರ್ವರಂಗದ ನೆನಪು- ಉಳಿವಿಗಾಗಿ ಅಭಿಯಾನ. ( ಅಂದಾಜು 25 ಕಾರ್ಯಕ್ರಮ)

*ಹಿರಿಯ ಅರ್ಥಧಾರಿ ದೇಶಮಂಗಲ ಕೃಷ್ಣ ಕಾರಂತರು ಜನ್ಮಶತಮಾನೋತ್ಸವ, ( ಒಂದು ವರ್ಷದಲ್ಲಿ ಕರ್ನಾಟಕ-ಕೇರಳದಾದ್ಯಂತ 12 ಕಾರ್ಯಕ್ರಮ ನಡೆಸಿ- ಪ್ರಶಸ್ತಿಯೊಂದಿಗೆ ಸಮಾರೋಪ)

* ಕಾಸರಗೊಡು ವೆಂಕಟರಮಣ ದೇವಸ್ಥಾನದಲ್ಲಿ ಯಕ್ಷಶ್ರೀಕರ ಸರಣಿ, ಒಂದು ವರ್ಷದ 12 ಕಾರ್ಯಕ್ರಮ, ಪ್ರಶಸ್ತಿಯೊಂದಿಗೆ ಸಮಾರೋಪ 

* ಕೇರಳದ ಗುರುವಾಯೂರು- ಆಲುವಾದಲ್ಲಿ ಮಲೆಯಾಳಂ ಯಕ್ಷಗಾನ ಪ್ರದರ್ಶನ 

*ರಂಗಪ್ರಸಂಗ ( ರಂಗ- ಪ್ರಸಂಗದ ಮಾಹಿತಿಗೆ- ದಾಖಲೀಕರಣ)ಕೇರಳದ ನೀರ್ಚಾಲ್ ನಲ್ಲಿ ಆರಂಬಿಸಿ, ಉಡುಪಿ, ಕಟೀಲು, ಬೆಂಗಳೂರು ನಲ್ಲಿ ಸೇರಿ ಒಟ್ಟು 8 ಕಾರ್ಯಕ್ರಮ, (ಮುದುವರಿಸಲಿದ್ದೇವೆ)

* ಅರ್ಥಾಂತರಂಗ ( ಯಕ್ಷಗಾನ ಅರ್ಥಗಾರಿಕಾ ಶಿಬಿರ)ಕರ್ನಾಟಕ- ಕೇರಳದ ಬೆಂಗಳೂರು, ಶಿರಸಿ,ಉಡುಪಿ, ಕಾಸರಗೋಡು ಸೇರಿ 13 ಕಾರ್ಯಕ್ರಮ, (ಮುಂದುವರಿಯಲಿದೆ)

* ಯಕ್ಷಕಾವ್ಯಾಂತರಂಗ( ಕವಿ- ಪ್ರಸಂಗ- ಛಂದಸ್ಸು ಪರಿಚಯ- ದಾಖಲೀಕರಣ) ಕೇರಳ- ಕರ್ನಾಟಕದಾದ್ಯಂತ 3 ಕಾರ್ಯಕ್ರಮ (ಮುಂದುವರಿಯಲಿದೆ)

* ವಿಶಿಷ್ಟ ರಂಗ ಕಲ್ಪನೆಯಲ್ಲಿ ಯಕ್ಷಗಾನ ಪ್ರದರ್ಶನ .ಬೆಂಗಳೂರು- ಮಂಗಳೂರು- ಕಾಸರಗೋಡು ನಲ್ಲಿ ಒಟ್ಟು 10 ಕ್ಕಿಂತ ಹೆಚ್ಚು ಪ್ರದರ್ಶನ. 

* ಹೈದರಾಬಾದ್ ನಗರದಲ್ಲಿ ಯಕ್ಷಾಷ್ಠಕಂ, 8 ಯಕ್ಷಗಾನ ಪ್ರದರ್ಶನ 

* ಕರ್ನಾಟಕದಾದ್ಯಂತ ಯಕ್ಷಗಾನ ಪ್ರದರ್ಶನ 

* ತಮಿಳುನಾಡಿನಲ್ಲಿ ಯಕ್ಷಗಾನ ಪ್ರದರ್ಶನ 

*2019 ರಲ್ಲಿ NGO ನೋಂದಾವಣೆ 

*ಕೊರೊನಾ ಜಾಗೃತಿ ಯಕ್ಷಗಾನ 

1) ಕೊರೊನಾ ಯಕ್ಷ ಜಾಗೃತಿ (ಯಕ್ಷಗಾನ) WHO ಮಹಾ ನಿರ್ದೇಶಕರಿಂದ ಮೆಚ್ಚುಗೆ, ಸಿಂಗಾಪುರ ವೆಬಿನಾರ್ ನಲ್ಲಿ ಪ್ರಸಾರ, ಮೆಚ್ಚುಗೆ 

2) ಯಕ್ಷಗಾನ ಕಲಾವಿದರಿಗಾಗಿ ಕೊರೊನಾ ಧಿಗ್ಬಂದನದ ಸಮಯದಲ್ಲಿ ಲೇಖನ ಸ್ಪರ್ಧೆ 

3) ಕೊರೊನಾ ಯಕ್ಷಗಾನ ಹಾಡುಗಳು ( ಕನ್ನಡ- ಮಲೆಯಾಳಂ)

4) ಕೊರೋನಾ ಯಕ್ಷ ಜಾಗೃತಿ ಯಕ್ಷಗಾನ ಬೊಂಬೇಯಾಟ (ಕನ್ನಡ- ಹಿಂದಿ- ಇಂಗ್ಲಿಷ್)

5) ಗಡಿನಾಡು ಕಾಸರಗೋಡಿನ ಯಕ್ಷಗಾನ ವೃತ್ತಿ ಕಲಾವಿದರಿಗಾಗಿ YouTube ನಲ್ಲಿ ಯಕ್ಷಗಾನ ಪ್ರದರ್ಶನ,

* ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ತೆಂಕುತಿಟ್ಟು ಯಕ್ಷಗಾನ ಬಣ್ಣದ ವೇಷದ ಕಮ್ಮಟ 

* ಶ್ರೀ ಮದ್ ಎಡನೀರು ಮಠದಲ್ಲಿ ಯಕ್ಷಪಂಚಕ ತಾಳಮದ್ಲೆ (2021)

* ವಿಟ್ಲದಲ್ಲಿ ತಾಳಮದ್ಲೆ ಸಪ್ತಾಹ 

6) ಎರಡನೇ. ಹಂತದ ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಪ್ರತಿಷ್ಠಾನದ ಯಕ್ಷಾನುಗ್ರಹ ವಾಟ್ಸಾಪ್ ಬಳಗದಲ್ಲಿ ಮರೆಯಲಾಗದ ಮಹಾನುಭಾವರು, ಕೀರ್ತಿಶೇಷರ ಸಂಸ್ಮರಣೆ, ಈಗಾಗಲೇ 220 ದಾಟಿದೆ. 

* ಅಂದಾಜು 2 ಕೊಟಿ ರೂಪಾಯಿ ವೆಚ್ಚದಲ್ಲಿ ಕಾಸರಗೋಡು, ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸನಡೆಸಿ, ಕೊರೊನಾ ಸಂಕಷ್ಟದಿಂದ ಸ್ವಲ್ಪ ಸಮಯ ಕಾಮಗಾರಿ ನಿಲ್ಲಿಸಿ ಈಗ ಆರಂಬಿಲಾಗಿದೆ. 90% ಕಾಮಗಾರಿ ಆಗಿರುತ್ತದೆ. 

*ಯಕ್ಷಗಾನ ನಾಟ್ಯ ತರಗತಿಗೆ ಆರಂಭವಾಗಿರುತ್ತದೆ

* ಸಾಂಸ್ಕೃತಿಕ ಭವನದಲ್ಲಿ ಕಲಾ ಸಾಂಸ್ಕೃತಿಕ ಸಾಹಿತ್ಯ ವೈಭವ ಆರಂಭಿಸಿ 8 ಕಾರ್ಯಕ್ರಮ ನಡೆದಿದೆ. 

ಸಾಂಸ್ಕೃತಿಕ ಭವನದಲ್ಲಿ ನಿರಂತರ ಕಲಾಪ್ರಾಕಾರಗಳ ತರಗತಿ, ಶಿಬಿರ ಜತೆ, ಗ್ರಂಥಾಲಯ, ರೆಕಾರ್ಡ್ ಸ್ಟುಡಿಯೊ, ಮಿನಿ ಹಾಲ್, ಗೆಸ್ಟ್ ರೂಮ್, ಮ್ಯೂಸಿಯಂ.

* ಗಡಿನಾಡು ಕಾಸರಗೋಡಿನ ತೆಂಕುತಿಟ್ಟು ಯಕ್ಷಗಾನದ ಬೆಳವಣಿಗೆಗೆ ಕಾರಣೀಭೂತರಾದ ಗಣ್ಯರ ಸಾಕ್ಷ್ಯ ಚಿತ್ರ ನಿರ್ಮಾಣ. (ಈಗಾಗಲೇ ಕೂಡ್ಲು ಸುಬ್ರಾಯ ಶ್ಯಾನುಭೊಗ್ ರ ಕುರಿತು ಆರಂಭಿಸಲಾಗಿದೆ)

* ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ನಿಂದ ಪ್ರತಿಷ್ಠಾನಕ್ಕೆ ” ಕನ್ನಡ ಸಿರಿ ಪ್ರಶಸ್ತಿ

*ಗುರು ನರಸಿಂಹ ಯಕ್ಷ ಬಳಗ. ಮೀಯಪದವು ಇವರಿಂದ ಯಕ್ಷ ಚಿಗುರು ಪ್ರಶಸ್ತಿ 

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಮುಂದಿನ ದಿನಗಳಲ್ಲಿ ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಭವನ ಲೋಕಾರ್ಪಣೆಯಾಗುವ ಡೃಢ ಸಂಕಲ್ಪ ಹೊಂದಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments