ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ವಿಚಿತ್ರವಾದ ಕ್ಷಣವನ್ನುಅನುಭವಿಸಿದರು.
ಮಾತುಕತೆ ಆರಂಭವಾದ ಕ್ಷಣದಲ್ಲಿ ಅಲ್ಲಿ ಅವರು “ಯಾರಾದರೂ ನನಗೆ ಸಹಾಯ ಮಾಡಬಹುದೇ?” ಎಂದು ಕೇಳಿ ಮುಜುಗರಕ್ಕೆ ಒಳಗಾದರು.
SCO ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಶೆಹಬಾಜ್ ಷರೀಫ್ ತನ್ನ ಇಯರ್‌ಫೋನ್ ಅನ್ನು ಪ್ಲಗ್ ಮಾಡುವಾಗ ವಿಚಿತ್ರವಾದ ಕಷ್ಟಕರವಾದ ಪರಿಸ್ಥಿಯನ್ನು ಎದುರಿಸಿದರು.
ಷರೀಫ್ ಸಹಾಯಕ್ಕಾಗಿ ಇತರರನ್ನು ಕರೆದರು ಮತ್ತು “ಯಾರಾದರೂ ನನಗೆ ಸಹಾಯ ಮಾಡಬಹುದೇ?” ಎಂದು ಕೇಳಿ ಮುಜುಗರಕ್ಕೆ ಒಳಗಾದರು.
ಗುರುವಾರ ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸಿದರು. ಸಭೆಯನ್ನು ಸ್ಥಾಪಿಸುವಾಗ, ಷರೀಫ್ ಅವರು ತಮ್ಮ ಇಯರ್‌ಫೋನ್ ಅನ್ನು ಪ್ಲಗ್ ಮಾಡಲು ಪ್ರಯತ್ನಿಸಿದಾಗ, ಅದರಲ್ಲಿ ವಿಫಲರಾಗಿ ವಿಚಿತ್ರವಾದ ಮುಜುಗರದ ಕ್ಷಣವನ್ನು ಎದುರಿಸಿದರು.
ಶರೀಫ್ ತನ್ನ ಇಯರ್‌ಫೋನ್‌ಗಳನ್ನು ಜೋಡಿಸಲು ತೊಂದರೆಯಾದ ನಂತರ ಸಹಾಯಕ್ಕಾಗಿ ಕರೆ ಮಾಡಿ, “ಯಾರಾದರೂ ನನಗೆ ಸಹಾಯ ಮಾಡಬಹುದೇ?” ಎಂದು ಕೇಳಿದರು. ಪುಟಿನ್ ಇದನ್ನು ನೋಡಿ ನಗುತ್ತಿದ್ದರು.
ಷರೀಫ್‌ಗೆ ಸಹಾಯ ಮಾಡಲು ಯಾರೋ ಬಂದ ನಂತರ ಅವರ ಇಯರ್‌ಫೋನ್ ಒಮ್ಮೆ ಸರಿಯಾಗುತ್ತದೆ. ಪುಟಿನ್ಮ ಮಾತು ಪ್ರಾರಂಭಿಸಿದ ನಂತರ ಮತ್ತೆ ಇಯಾರ್ ಫೋನ್ ಬೀಳುತ್ತದೆ, ಇದು ಪುಟಿನ್ ಮುಖದಲ್ಲಿ ಮತ್ತೆ ನಗುವನ್ನು ತರಿಸಿತು. ವೀಡಿಯೊ ನೋಡಿ
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
