Sunday, January 19, 2025
Homeಸುದ್ದಿಪುತ್ತೂರು ತಿಂಗಳಾಡಿಯ ಅಂಗಡಿಯಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಂ ಯುವಕನ ಬಂಧನ 

ಪುತ್ತೂರು ತಿಂಗಳಾಡಿಯ ಅಂಗಡಿಯಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಂ ಯುವಕನ ಬಂಧನ 

ಪುತ್ತೂರು ಸಮೀಪದ ಕುಂಬ್ರದ ತಿಂಗಳಾಡಿಯ ಅಂಗಡಿಯೊಂದರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ. ಅಂಗಡಿಗೆ ಆಹಾರ ವಸ್ತುಗಳನ್ನು ಖರೀದಿಗೆಂದು ಆ ಯುವತಿ ಬಂದಿದ್ದರು.

ಅಷ್ಟರಲ್ಲಿ ಅಲ್ಲಿದ್ದ ಯುವಕ ಬದ್ರುದ್ದೀನ್ ಎಂಬಾತ ಯುವತಿಯ ದೇಹವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ. 

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿರುವ ಸೂಪರ್ ಬಜಾರ್ ಅಂಗಡಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಹಿಂದೂ ಯುವತಿ ಬಂದಿದ್ದರು. ಅವರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾಗ ಅಲ್ಲಿದ್ದ ಸೊರಕೆ ಸಮೀಪದ ನಿವಾಸಿ ಬದ್ರುದ್ದೀನ್ ಎಂಬಾತ ಆಕೆಯ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.

ಗಾಬರಿಗೊಂಡ ಯುವತಿ ಬೊಬ್ಬೆ ಹೊಡೆಯುತ್ತಿದ್ದಂತೆ ಬದ್ರುದ್ದೀನ್ ಅಲ್ಲಿಂದ ಓಡಿ ಹೋಗಿದ್ದಾನೆ. ವಿಷಯ ತಿಳಿದ ಹಿಂದೂ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅಂಗಡಿಯ ಮುಂದೆ ಜಮಾಯಿಸಿದ್ದರು.

ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದು ಬಂಧಿಸದಿದ್ದರೆ ಇಂದು ಬಂದ್ ಮಾಡುವ ನಿರ್ಣಯವನ್ನು ಕೈಗೊಂಡಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದುದನ್ನು ಕಂಡು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಜನರನ್ನು ಸಮಾಧಾನಪಡಿಸಿ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದರು.

ಅದರಂತೆ ಧಾತನೆ ನಡೆದ ಕೆಲವು ಘಂಟೆಯೊಳಗೆ ಆರೋಪಿ ಬದ್ರುದ್ದೀನ್ ಬಂಧನವಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯ ಬಂಧನವಾಗುತ್ತಿದ್ದಂತೆ ನಿನ್ನೆ ನೀಡಿದ್ದ ಬಂದ್ ಕರೆಯನ್ನು ಹಿಂತೆಗೆಯಲಾಗಿದೆ. ಆದರೆ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments