ಕರ್ನಾಟಕ, ಕೇರಳ ಉಭಯ ರಾಜ್ಯಗಳ ಪುರಸ್ಕೃತ, ಖ್ಯಾತ ಯಕ್ಷಗಾನ ಕಲಾವಿದ ಮಧೂರು ಶ್ರೀ ಗಣಪತಿ ರಾವ್ ಅವರ 10ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ದಿನಾಂಕ 17.09.2022ರ ಶನಿವಾರ ಮಂಗಳೂರು ಉರ್ವಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಸಲಾಗುವುದು.
ಆ ಪ್ರಯುಕ್ತ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ವಿದುರಾತಿಥ್ಯ, ಧುರವೀಳ್ಯ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು.
ಈ ಕಾರ್ಯಕ್ರಮಕ್ಕೆ ಶ್ರೀ ಮಧೂರು ಗಣಪತಿ ರಾವ್ ಅವರ ಮಕ್ಕಳು ಮತ್ತು ಬಂಧುಮಿತ್ರರು ಯಕ್ಷಕಲಾಭಾಮಾನಿಗಳೆಲ್ಲರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
ಕಾರ್ಯಕ್ರಮದ ವಿವರಗಳಿಗೆ ಕರಪತ್ರವನ್ನು ನೋಡಿ.

