ದಯವಿಟ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸಬೇಡಿ. ಇಲ್ಲೊಬ್ಬ ಭೀಕರ ಅಪಘಾತವೊಂದರಲ್ಲಿ ಬಸ್ ನಡಿಗೆ ಸಿಲುಕಿದ ವ್ಯಕ್ತಿ ಬದುಕುಳಿದಿದ್ದಾನೆ.
ಬ್ರೆಜಿಲ್‌ನಲ್ಲಿ ವ್ಯಕ್ತಿಯೊಬ್ಬ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳು ಆಘಾತಕಾರಿ ಕ್ಷಣವನ್ನು ತೋರಿಸುತ್ತವೆ.
ವೇಗವಾಗಿ ಬಂದ ಬೈಕ್ ಬಸ್ ನ್ನು ಕಂಡೊಡನೆ ಬ್ರೇಕ್ ಹಾಕುತ್ತದೆ. ಆಗ ಸ್ಕಿಡ್ ಆಗಿ ಬೈಕ್ ಸವಾರ ಹಾರಿಬಿದ್ದು ಅವನ ತಲೆ ಚಕ್ರದಡಿಗೆ ಸಿಲುಕುತ್ತದೆ.
ಬೈಕ್ ಸವಾರ ಬಸ್ಸಿನ ಕೆಳಗೆ ಬಿದ್ದಿರುವುದು ಕಂಡು ಬರುತ್ತಿದೆ. ಆದರೂ ಆಮೇಲೆ ಅವನು ನಂತರ ತನ್ನ ಕಾಲುಗಳಲ್ಲಿ ನಿಂತುಕೊಳ್ಳಲು ಸಾಧ್ಯವಾಯಿತು.
ವ್ಯಕ್ತಿಯು ಮೂಗೇಟುಗಳನ್ನು ಮಾತ್ರ ತಗುಲಿ ಬಚಾವಾದನು. ಆತನ ತಲೆಯಲ್ಲಿ ಹೆಲ್ಮೆಟ್ ಇದ್ದುದರಿಂದ ಆತನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
