Sunday, January 19, 2025
Homeಸುದ್ದಿಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಅಫಘಾತ - ಬಸ್ ಕಂದಕಕ್ಕೆ ಬಿದ್ದು ನಾಲ್ವರು ಸಾವು, ಹಲವರಿಗೆ ಗಾಯ 

ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಅಫಘಾತ – ಬಸ್ ಕಂದಕಕ್ಕೆ ಬಿದ್ದು ನಾಲ್ವರು ಸಾವು, ಹಲವರಿಗೆ ಗಾಯ 

ನಿನ್ನೆಯ ಪೂಂಚ್ ಜಿಲ್ಲೆಯ ಅಫಘಾತದ ಕರಾಳ ನೆನಪು ಮಾಸುವ ಮುನ್ನವೇ ಇಂದು ಮುಂಜಾನೆ ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಅಫಘಾತ ಸಂಭವಿಸಿದೆ. 

ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಭಿಂಬರ್ ಗಲಿ ಬಳಿ ಹಲವಾರು ಪ್ರಯಾಣಿಕರಿದ್ದ ಬಸ್ ಆಳವಾದ ಕಂದಕಕ್ಕೆ ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ. ಈ ಅಫಘಾತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಈ ವಿಚಾರವನ್ನು ಮಂಜಕೋಟೆ ತಹಸೀಲ್ದಾರ್ ಜಾವೇದ್ ಚೌಧರಿಯವರು ಖಚಿತಪಡಿಸಿದ್ದಾರೆ. ರಾಜೌರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಿಂದ ಪ್ರಾಣಹಾನಿಯಿಂದ ತಲ್ಲಣಗೊಂಡಿದೆ.

ಈ ದುಃಖದ ಸಮಯದಲ್ಲಿ, ನಾವೆಲ್ಲರೂ ದುಃಖಿತ ಕುಟುಂಬಗಳೊಂದಿಗೆ ಇದ್ದೇವೆ. . ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಹಾರ ಕಾರ್ಯ ಭರದಿಂದ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments