Sunday, January 19, 2025
Homeಸುದ್ದಿಉಪ್ಪಿನಂಗಡಿ ರೋಟರಿ ಕ್ಲಬ್ಬಿನಿಂದ  ಫ್ಯಾನುಗಳ ಕೊಡುಗೆ

ಉಪ್ಪಿನಂಗಡಿ ರೋಟರಿ ಕ್ಲಬ್ಬಿನಿಂದ  ಫ್ಯಾನುಗಳ ಕೊಡುಗೆ

ಉಪ್ಪಿನಂಗಡಿ ಮಹತೋಭಾರ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸಭಾಭವನದ ಆವರಣದಲ್ಲಿ ಭಕ್ತಾದಿಗಳಿಗೆ ಉಪಯುಕ್ತ ಆಗುವಂತೆ 30 ಫ್ಯಾನುಗಳನ್ನು ಉಪ್ಪಿನಂಗಡಿ ರೋಟರಿ ಕ್ಲಬ್ಬಿನ ವತಿಯಿಂದ ಅಳವಡಿಸಿಲಾಗಿದ್ದು ರೋಟರಿ ಜಿಲ್ಲೆ 3181ರ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಆಚಾರ್ಯ ಮತ್ತು ಸಹಸ್ರಲಿಂಗೇಶ್ವರ ದೇವಾಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕರುಣಾಕರ ಸುವರ್ಣ ಚಾಲನೆ ನೀಡಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಜಗದೀಶ ನಾಯಕ್ ಮಾತನಾಡಿ ರೂಪಾಯಿ 50 ಸಾವಿರ ವೆಚ್ಚದಲ್ಲಿ ಫ್ಯಾನುಗಳನ್ನು ಅಳವಡಿಸಲು ಸಹಕರಿಸಿದ ರೋಟರಿ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ರೋಟರಿ ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷರಾದ ನೀರಜ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜಯಂತ ಪುರೋಳಿ, ಹರಿರಾಮಚಂದ್ರ, ಶ್ರೀಮತಿ ಹರಿಣಿ, ರೋಟರಿ ಕ್ಲಬ್ ಪೂರ್ವ ಅಧ್ಯಕ್ಷರುಗಳಾದ ವಿಜಯಕುಮಾರ್ ಕಲ್ಲಲಿಕೆ, ದಿವಾಕರ ಆಚಾರ್ಯ ಗೇರುಕಟ್ಟೆ, ಅಬ್ದುಲ್ ರಹಿಮಾನ್ ಯೂನಿಕ್, ಡಿ.ಸಿ ಚಂದಪ್ಪ ಮೂಲ್ಯ ಮತ್ತು ಇತರ ಪದಾಧಿಕಾರಿಗಳು, ದೇವಳದ ಕಚೇರಿಯ ವೆಂಕಟೇಶ್ ಭಟ್, ದಿವಾಕರ ಗೌಡ ,ಪದ್ಮನಾಭ ಕುಲಾಲ್ ಉಪಸ್ಥಿತರಿದ್ದರು.

ಈ  ಯೋಜನೆಯ ನಿರ್ದೇಶಕರಾದ ರೋ. ಸ್ವರ್ಣೇಶ ಗಾಣಿಗ, ಗುಣಕರ  ಅಗ್ನಾಡಿ ಮತ್ತು ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕರನ್ನು ಗೌರವಿಸಲಾಯಿತು.

ರೊಟೇರಿಯನ್ ರವೀಂದ್ರ. ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments