ಲೇಡೀಸ್ ಟೈಲರಿಂಗ್ ನ ಹಲವು ವಿಭಾಗಗಳ ತರಬೇತಿಯು ಒಂದೆಡೆಯಲ್ಲಿಯೇ ದೊರಕುವ ಸುವರ್ಣಾವಕಾಶ ಮಹಿಳೆಯರಿಗೆ ಲಭ್ಯವಿದೆ.
ಒಂದೇ ತರಬೇತಿ ಕೇಂದ್ರದಲ್ಲಿ ಟೈಲರಿಂಗ್ ನ ವಿಭಾಗಗಳಾದ ಹೊಲಿಗೆ, ಕಟ್ಟಿಂಗ್, ಹ್ಯಾಂಡ್ ವರ್ಕ್, ಮೆಷೀನ್ ವರ್ಕ್, ಸಾರಿ ಗೊಂಡೆ, ಕ್ರೋಶರ ಗೊಂಡೆ, ಸಾರಿ ಫಾಲ್ ಮೊದಲಾದುವುಗಳ ತರಬೇತಿಯನ್ನು ನುರಿತ ಟೈಲರ್ ಗಳಿಂದ ನೀಡಲಾಗುವುದು.
ಇವುಗಳಲ್ಲದೆ ಲೇಡೀಸ್ ವಿಭಾಗದ ಎಲ್ಲಾ ಫ್ಯಾಶನ್ ಬಟ್ಟೆಯನ್ನು ಹೊಲಿಯಲು ಕಲಿಸಲಾಗುವುದು ಎಂದು ಅಪ್ಸರಾ ಲೇಡೀಸ್ ಟೈಲರ್ ಮತ್ತು ಎಂಬ್ರಾಯಿಡರಿ, ಕಲ್ಲಾರೆ ಪುತ್ತೂರು ಇದರ ಮಾಲೀಕರಾದ ಎ. ಮಹಾಬಲ ರೈಯವರು ತಿಳಿಸಿದ್ದಾರೆ.
ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಮೊಬೈಲ್ ದೂರವಾಣಿ ಸಂಖ್ಯೆ 9972924407 ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.