Saturday, January 18, 2025
Homeಸುದ್ದಿಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ)  ಕೇಂದ್ರ ಸಮಿತಿಯ ಸಭೆ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ)  ಕೇಂದ್ರ ಸಮಿತಿಯ ಸಭೆ

ಸಮಾಜದಲ್ಲಿರುವ  ಕುಂದು ಕೊರತೆಗಳನ್ನು ನಿವಾರಿಸುವಲ್ಲಿ ಹಿರಿಯರ ಸೇವಾ ಪ್ರತಿಷ್ಠಾನವು ಮಹತ್ವದ ಪಾತ್ರವನ್ನು ನಿರ್ವಹಿಸಲು ಸಾಧ್ಯವಿದೆ. 50 ವಯಸ್ಸಿಗಿಂತ ಹೆಚ್ಚಿನ ನಾಗರಿಕರು ಪ್ರತಿಷ್ಠಾನದೊಂದಿಗೆ ಸೇರಿಕೊಂಡು ಉತ್ತಮ ಕಾರ್ಯಗಳನ್ನು ಮಾಡುವಂತೆ ಸಂಘಟನೆಯನ್ನು ಬಲಗೊಳಿಸಬೇಕೆಂದು ಉಳ್ಳಾಲ ಕ್ಷೇತ್ರದ ಮಾಜಿ ಶಾಸಕರಾದ ಜಯರಾಮ ಶೆಟ್ಟಿ .ಕೆ ತಿಳಿಸಿದರು.

ಕೈರಂಗಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ)  ಕೇಂದ್ರ ಸಮಿತಿಯ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ವಿವಿಧ ತಾಲೂಕುಗಳ ಪ್ರತಿಷ್ಠಾನದ ಘಟಕಗಳ ಕಾರ್ಯ ಚಟುವಟಿಕೆಗಳನ್ನು ಸಮೀಕ್ಷೆ ಮಾಡಿ ಸತ್ಸಂಗವನ್ನು ನಡೆಸಿಕೊಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ ಎ. ವಿ ನಾರಾಯಣ  ಪುತ್ತೂರು ಪ್ರತಿಷ್ಠಾನದ ಮುಂದಿನ ಯೋಜನೆಗಳನ್ನು ತಿಳಿಸಿ ಕಾರ್ಯಕ್ರಮದ ಪ್ರಾಯೋಜಕರಾದ ಪ್ರತಿಷ್ಠಾನದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಕೈರಂಗಳ ಇವರನ್ನು ಗೌರವಿಸಿದರು.

ಕೆ. ನಾರಾಯಣ ನಾಯಕ್ ಸಿ.ಎಚ್ ಸೀತಾರಾಮ ಶೆಟ್ಟಿ, ಉದಯಶಂಕರ ರೈ, ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷರಾದ ಭರತ್. ಕೆ,  ಬಾಲಕೃಷ್ಣ ಶೆಟ್ಟಿ ಗಣೇಶ್ ಆಚಾರ್ಯ ಜಪ್ಪು ಬಿ .ಗೋವಿಂದ ಭಟ್,  ಎ.ಕೃಷ್ಣಶರ್ಮ, ಶ್ರೀಮತಿ ಶಂಕರಿ. ಎಸ್ ಭಟ್ ಕೈ ರಂಗಳ,  ಶ್ರೀಮತಿ ಚಂದ್ರಿಕಾ ಕೈ ರಂಗಳ ಉಪಸ್ಥಿತರಿದ್ದರು.

ಭಜಕ ರವಿ ಮಂಜನಾಡಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ಸಹ ಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಭಟ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments