1961 ರಲ್ಲಿ ಕ್ವೀನ್ ಎಲಿಜಬೆತ್ II ಬೆಂಗಳೂರಿಗೆ ಭೇಟಿ ನೀಡಿದ ದಿನದ್ದು ಎಂದು ಹೇಳಲಾಗುತ್ತಿರುವ ಅಪರೂಪದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇದೆ.
ಆ ದಿನ ಅವರನ್ನು ರಾಜ್ಯಪಾಲರು ಹಾಗೂ ಮೈಸೂರು ರಾಜ್ಯದ ಮಾಜಿ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವಾಗತಿಸಿದ್ದರು.
ಅವರು ಆ ದಿನ ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಭೇಟಿ ನೀಡಿ ಗಿಡಗಳನ್ನು ನೆಟ್ಟು ಅದಕ್ಕೆ ನೀರು ಹಾಕಿದರು. ಆಮೇಲೆ ಬೆಂಗಳೂರು ನಗರದ ಎಂ.ಜಿ ರಸ್ತೆಯಲ್ಲಿ ರೋಡ್ ಷೋ ನಡೆಸಿದರು.
ಮಹಿಳೆಯೊಬ್ಬರು ರಾಣಿಗೆ ಪ್ರೀತಿಯಿಂದ ಹಣ್ಣೊಂದನ್ನು ನೀಡುವ ದೃಶ್ಯವನ್ನೂ ಕಾಣಬಹುದು.