ಕಳೆದ 40 ವರ್ಷದಿಂದ ಸದಾಚಟುವಟಿಕೆಯಿಂದಿರುವ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರ ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮ ದಿನಾಂಕ 02-09-2022ರಂದು ಸಂಜೆ 7:00ಕ್ಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ, ಬೈಂದೂರು ಇಲ್ಲಿ “ಕೃಷ್ಣಾರ್ಜುನ” ಯಕ್ಷಗಾನ ಪ್ರದರ್ಶನ ನಡೆಯಿತು.
ದಿನಾಂಕ 04-09-2022ರಂದು ಬೆಂಗಳೂರಿನ ಜೆ.ಪಿ. ನಗರದ ಶ್ರೇಯಸ್ ಕಾಲನಿಯಲ್ಲಿ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಂಜೆ 6:00ಕ್ಕೆ “ಸುದರ್ಶನ ವಿಜಯ” ಯಕ್ಷಗಾನ ಪ್ರದರ್ಶನ ನಡೆಯಿತು.
ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ಲಂಬೋದರ ಹೆಗಡೆ, ಶಿವಾನಂದ ಕೋಟ, ಉದಯ ಕಡಬಾಳ, ರಾಘವೇಂದ್ರ ಹೆಗಡೆ, ಮಂಜುನಾಥ ನಾವುಡ, ಸ್ಫೂರ್ತಿ ಭಟ್, ತಮ್ಮಣ್ಣ ಗಾಂವ್ಕರ್, ರಾಮಕೃಷ್ಣ ಭಟ್, ಆದಿತ್ಯ ಹೆಗಡೆ, ಗಣೇಶ ಉಪ್ಪುಂದ, ವಿಜಯ ಬೀಜನಮಕ್ಕಿ, ಉದಯ ಬೋವಿ, ಗೋವಿಂದ, ನವೀನ್ ಕೋಟ, ರಾಜು ಪೂಜಾರಿ ಇನ್ನಿತರರು ಭಾಗವಹಿಸಿದರು.