ಪುತ್ತೂರು, ಸೆ 8: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2022ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮನ್ವಿತ ಎನ್. ಪಿ (ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾ ದಂಪತಿ ಪುತ್ರಿ) ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 553 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 46928ನೇ ರ‍್ಯಾಂಕ್, ಕೆಟಗರಿ ವಿಭಾಗದಲ್ಲಿ 18052 ನೇ ರ‍್ಯಾಂಕ್ ಗಳಿಸಿದ್ದಾರೆ.ಈಕೆ 2021-22 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದರು.
ವಿನೀತ್ ಜೆ (ಪುತ್ತೂರಿನ ಜಯಂತ ಮತ್ತು ಸರೋಜಿನಿ ಎನ್ ದಂಪತಿ ಪುತ್ರ) 548 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 50369ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 22407 ನೇ ರ‍್ಯಾಂಕ್, ಸಾತ್ವಿಕ್ ಶಿವಾನಂದ್ (ಸುಳ್ಯದ ಶ್ರೀರಾಮ ಪಿ ಸಿ ಮತ್ತು ಶಿಲ್ಪಾ ಪಿ. ಎಸ್ ದಂಪತಿ ಪುತ್ರ) 528 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 63498ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 23754 ನೇ ರ‍್ಯಾಂಕ್,
ಶ್ರೀನಿಧಿ ಐ (ಕಾಸರಗೊಡಿನ ಪೆರ್ಲದ ಹರೀಶ್ ಐ ಮತ್ತು ಜಯಪ್ರದ ಕೆ ದಂಪತಿ ಪುತ್ರ) 509 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 77394ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 28466 ನೇ ರ‍್ಯಾಂಕ್, ಸ್ತುತಿ ಎಂ. ಎಸ್ (ಪುತ್ತೂರಿನ ನೆಹರೂ ನಗರದ ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ದಂಪತಿ ಪುತ್ರಿ) 488 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 93373ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 33632 ನೇ ರ‍್ಯಾಂಕ್,
ಶ್ರೇಯಸ್ ಕಮಲ್ 454 ಅಂಕಗಳನ್ನು ಪಡೆದು ಕೆಟಗರಿ ವಿಭಾಗದಲ್ಲಿ 40040 ನೇ ರ‍್ಯಾಂಕ್, ಕೆ. ಎ. ಅನನ್ಯ 430 ಅಂಕಗಳನ್ನು ಪಡೆದು ಕೆಟಗರಿ ವಿಭಾಗದಲ್ಲಿ 50078 ನೇ ರ‍್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.







ಮನ್ವಿತ ಎನ್. ಪಿ, ವಿನೀತ್ ಜೆ, ಸಾತ್ವಿಕ್ ಶಿವಾನಂದ್, ಶ್ರೀನಿಧಿ ಐ, ಸ್ತುತಿ ಎಂ. ಎಸ್, ಶ್ರೇಯಸ್ ಕಮಲ್, ಕೆ. ಎ. ಅನನ್ಯ