8ನೆಯ ತರಗತಿಯ ವಿದ್ಯಾರ್ಥಿಯ ಕಾಲು ಮುರಿತ, ಪ್ರಾಂಶುಪಾಲರು ಥಳಿಸಿದ ಆರೋಪ – ತನಿಖೆಗೆ ಆದೇಶ
8ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಕುಟುಂಬವೊಂದು ಆರೋಪಿಸಿದೆ.
ಉತ್ತರ ಪ್ರದೇಶದ ಜೈ ಜವಾನ್ ಜೈ ಕಿಸಾನ್ ಇಂಟರ್ ಕಾಲೇಜಿನ ಪ್ರಾಂಶುಪಾಲರು 8ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಆ ಕುಟುಂಬ ಹೇಳಿದ್ದು ನ್ಯಾಯ ಒದಗಿಸುವಂತೆ ದೂರು ನೀಡಿದೆ.
ಮಗುವಿಗೆ ಮುರಿತಗಳಿವೆ; ವೈದ್ಯಕೀಯ ವರದಿಗಳೂ ಇದನ್ನೇ ಸೂಚಿಸುತ್ತವೆ. ನಾನು 2 ದಿನಗಳಲ್ಲಿ ಈ ವಿಷಯವನ್ನು ತನಿಖೆ ಮಾಡಲು SDM, CO ಮತ್ತು DRS ತಂಡವನ್ನು ರಚಿಸುತ್ತಿದ್ದೇನೆ ಎಂದು ಶಾಮ್ಲಿ ಜಿಲ್ಲಾಧಿಕಾರಿ ಜಸ್ಜಿತ್ ಕೌರ್ ಹೇಳಿಕೆ ನೀಡಿದ್ದಾರೆ.