ಅಕ್ರಮ ಪನೀರ್ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿ 1.98 ಲಕ್ಷ ರೂಪಾಯಿ ಮೌಲ್ಯದ ಸುಮಾರು 900 ಕೆಜಿ ಕಲಬೆರಕೆ ಪನೀರ್ ವಶಪಡಿಸಿಕೊಳ್ಳಲಾಗಿದೆ.
ಭಾರತದಲ್ಲಿ ಆಹಾರದಲ್ಲಿ ವ್ಯಾಪಕವಾದ ಕಲಬೆರಕೆ ಮಾಡಲಾಗುತ್ತದೆ ಎಂದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಹಾಗಾದರೆ ನಾವು, ನೀವು ತಿನ್ನುತ್ತಿರುವುದು ಶುದ್ಧ ಪನೀರ್ ಅಲ್ಲವೇ ಎಂಬ ಸಂಶವು ಎಲ್ಲರಲ್ಲಿಯೂ ಮೂಡಿದರೆ ಅದರಲ್ಲೇನೂ ಆಶ್ಚರ್ಯವಿಲ್ಲ.
ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಅಕ್ರಮ ಕಾರ್ಖಾನೆಯೊಂದರ ಮೇಲೆ ಪುಣೆ ಎಫ್‌ಡಿಎ (ಆಹಾರ ಮತ್ತು ಔಷಧ ಆಡಳಿತ) ದಾಳಿ ನಡೆಸಿ 1.98 ಲಕ್ಷ ರೂಪಾಯಿ ಮೌಲ್ಯದ ಸುಮಾರು 900 ಕೆಜಿ ಕಲಬೆರಕೆ ಪನೀರ್ ಅನ್ನು ವಶಪಡಿಸಿಕೊಂಡಿದೆ.
2.24 ಲಕ್ಷ ಮೌಲ್ಯದ ಕೆನೆ ತೆಗೆದ ಹಾಲಿನ ಪುಡಿ ಮತ್ತು ಆರ್‌ಬಿಡಿ ಪ್ಯಾಮೊಲಿನ್ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪುಣೆಯ ಆಹಾರ ಮತ್ತು ಔಷಧ ಆಡಳಿತದ ಸಹಾಯಕ ಆಯುಕ್ತ ಸಂಜಯ್ ನರಗುಡೆ ತಿಳಿಸಿದ್ದಾರೆ. ಹೆಚ್ಚಿನ ವಿವರವನ್ನು ನಿರೀಕ್ಷಿಸಲಾಗುತ್ತದೆ.