ಪುತ್ತೂರು ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ತಾಳಮದ್ದಳೆ
ದಿನಾಂಕ 05.09.2022ನೇ ಸೋಮವಾರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ “ಸೂರ್ಯಮಣಿ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಾಡುಗಾರಿಕೆಯಲ್ಲಿ ಪ್ರಶಾಂತ ರೈ ಪುತ್ತೂರು, ಮದ್ದಳೆಯಲ್ಲಿ ಸತ್ಯಜಿತ್ ರಾವ್ ಮೂಡಬಿದ್ರೆ, ಚೆಂಡೆಯಲ್ಲಿ ತಾರಾನಾಥ ಸವಣೂರು,
ಶ್ರೀಕೃಷ್ಣನಾಗಿ -ದಿವಾಕರ ಆಚಾರ್ಯ ಗೇರುಕಟ್ಟೆ, ಜಾoಬವನಾಗಿ ಗುಡ್ಡಪ್ಪ ಬಲ್ಯ, ಬಲರಾಮನಾಗಿ ಹರಿಕಿರಣ ಕೊಯಿಲ, ನಾರದನಾಗಿ ತಾರಾನಾಥ ಸವಣೂರು ಭಾಗವಹಿಸಿದರು.