75 ರ ಯುವಕ (?) 28 ರ ಯುವತಿಯನ್ನು ಮದುವೆಯಾದ ವಿಲಕ್ಷಣ, ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, ವೃದ್ಧ ಮದುಮಗನ ಕಡೆಯಿಂದ ಮಹಿಳೆಯ ಕುಟುಂಬಕ್ಕೆ 2.5 ಕೋಟಿ ರೂಪಾಯಿ ನೀಡಿರುವುದಾಗಿಯೂ ವರದಿಯಾಗಿದೆ. ಪುದುಚೇರಿಯ ವೃದ್ಧರೊಬ್ಬರು ಫ್ರಾನ್ಸ್ ನಲ್ಲಿ ನೆಲೆಸಿದ್ದಾರೆ.
ತಮಿಳುನಾಡಿನ ಪುದುಚೇರಿಯ ವೃದ್ಧರೊಬ್ಬರು ಫ್ರಾನ್ಸ್ ನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಪುದುಚೇರಿಗೆ ಬಂದಿದ್ದಾರೆ. ಪತ್ನಿ ತೀರಿಕೊಂಡಿದ್ದರಿಂದ ಕುಟುಂಬದ ಜವಾಬ್ದಾರಿ ನಿಭಾಯಿಸುವವರೇ ಇಲ್ಲದೇ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಎಲ್ಲರಲ್ಲಿಯೂ ಅಳಲು ತೋಡಿಕೊಂಡರು.
ವೃದ್ಧನ ಸಂಬಂಧಿಕರು ಆ ಪ್ರದೇಶದ ಪತಿಯನ್ನು ಕಳೆದುಕೊಂಡ 28 ವರ್ಷದ ಯುವತಿಯನ್ನು ಮಾತನಾಡಿಸಿ ವೃದ್ಧನೊಂದಿಗೆ ಮದುವೆಯಾಗಲು ವ್ಯವಸ್ಥೆ ಮಾಡಿದರು. ಯುವತಿ ವಿಧವೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಇಬ್ಬರೂ ಇತ್ತೀಚೆಗೆ ಪುದುಚೇರಿಯ ಮನಕುಲ ವಿನಾಯಕರ್ ದೇವಸ್ಥಾನದಲ್ಲಿ ವಿವಾಹವಾದರು. ಈ ಕುರಿತು ದೇವಸ್ಥಾನದ ಧರ್ಮದರ್ಶಿಗಳು ತಿಳಿಸಿದ್ದಾರೆ.
ಪುದುಚೇರಿಯ ವಿನಾಯಕರ್ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಯುವತಿ ವೃದ್ಧನನ್ನು ಮದುವೆಯಾಗುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಅಲ್ಲದೇ ಇಬ್ಬರ ಕುಟುಂಬಸ್ಥರು ಹಾಗೂ ಸಂಬಂಧಿಕರು ಮದುವೆಯಲ್ಲಿ ಪಾಲ್ಗೊಂಡಿದ್ದರು.
ಈ ಮದುವೆಯ ವಿಡಿಯೋ ಇದೀಗ ಹೊರಬಂದಿದ್ದು, ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಧು ಮತ್ತು ವರ ಇಬ್ಬರ ಹೆಸರು ಮತ್ತು ಊರಿನ ಬಗ್ಗೆ ಯಾವುದೇ ವಿವರಗಳು ತಿಳಿದುಬಂದಿಲ್ಲ. ಮತ್ತು ಇಬ್ಬರೂ ಮದುವೆಯಾಗಲು ಶಾಸಕರಿಂದ ಶಿಫಾರಸು ಪತ್ರವನ್ನು ತಂದಿದ್ದರು.
ಇಬ್ಬರೂ ತಮ್ಮ ವಯಸ್ಸನ್ನು ಮುಚ್ಚಿಟ್ಟುಕೊಳ್ಳದೆ ಒಪ್ಪಿಕೊಂಡು ಮದುವೆಯಾದರು. ಅಷ್ಟೇ ಅಲ್ಲ, ವೃದ್ಧ ಮದುಮಗನ ಕಡೆಯಿಂದ ಮಹಿಳೆಯ ಕುಟುಂಬಕ್ಕೆ 2.5 ಕೋಟಿ ರೂಪಾಯಿ ನೀಡಿರುವುದಾಗಿಯೂ ವರದಿಯಾಗಿದೆ.