Saturday, January 18, 2025
Homeಸುದ್ದಿಪ್ರಿಯಕರನೊಂದಿಗೆ ಸೇರಿ ಗಂಡನ ಕಥೆಯನ್ನೇ ಮುಗಿಸಿದ ಪತ್ನಿ - ಪತ್ನಿ, ಪ್ರಿಯಕರ ಅರೆಸ್ಟ್ 

ಪ್ರಿಯಕರನೊಂದಿಗೆ ಸೇರಿ ಗಂಡನ ಕಥೆಯನ್ನೇ ಮುಗಿಸಿದ ಪತ್ನಿ – ಪತ್ನಿ, ಪ್ರಿಯಕರ ಅರೆಸ್ಟ್ 

ಕೆಲವೊಮ್ಮೆ ಅನೈತಿಕ ದೈಹಿಕ ಸಂಬಂಧಗಳು ಮತ್ತು ಲೈಂಗಿಕತೆಯ ಅತಿಯಾದ ಆಸಕ್ತಿ ಮನುಷ್ಯನನ್ನು ಎಂತಹಾ ಕೆಲಸಗಳಿಗೂ ಪ್ರಚೋದಿಸುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲೊಂದು ಪ್ರಕರಣವೂ ಅದೇ ರೀತಿ ಇದೆ. 

ಮಾಂಗಲ್ಯ ಕಟ್ಟಿದ ಗಂಡನನ್ನೇ  ಕೊಂದು  ಪಿಟ್ಸ್ ರೋಗದಿಂದ ಸತ್ತ ಎಂದು ಪ್ರಚಾರ ಮಾಡಿದ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಕೊನೆಗೂ  ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಮಹೇಶ್ ಎಂಬಾತನನ್ನು ಆತನ ಪತ್ನಿಯಾದ ಶಿಲ್ಪಾ ಮತ್ತು ಆಕೆಯ ಪ್ರಿಯತಮ ಸೇರಿಕೊಂಡು ಕೊಲೆ ಮಾಡಿದ್ದಾರೆ.

ಆಮೇಲೆ ಮೂರ್ಛೆರೋಗ ಬಂದು ಮೃತಪಟ್ಟಿದ್ದಾನೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಆಮೇಲೆ ಶವವನ್ನು ತಮ್ಮ ಊರಾದ ಮಂಡ್ಯಕ್ಕೆ ತಂದು ಮೂರ್ಛೆರೋಗದ ಕಟ್ಟುಕತೆ ಹೆಣೆದಿದ್ದಾಳೆ.

ಆದರೆ ಆಕೆಯ ಮಾತುಗಳಲ್ಲಿ ನಾಟಕದ ಛಾಯೆಯನ್ನು ಕಂಡ ಮಹೇಶನ ಮನೆಯವರು ಮೃತದೇಹವನ್ನು ಪರೀಕ್ಷೆ ಮಾಡಿದರು. ಆಗ ಅವರಿಗೆ ಮೃತ ಮಹೇಶನ ದೇಹದಲ್ಲಿ ಗಾಯಗಳ ಗುರುತುಗಳು ಕಂಡುಬಂದುವು. ಇದರಿಂದ ಮತ್ತಷ್ಟು ಅನುಮಾನಗೊಂಡ ಅವರು ಪೊಲೀಸರಿಗೆ ದೂರು ನೀಡಿದರು.

ಕೂಡಲೇ ಪೋಷಕರು ಮಂಡ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಬಯಲಾಯಿತು.  ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹೇಶ ಕೊಲೆಯಾದುದು ದೃಢಪಟ್ಟಿದೆ. 

ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣನಕುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ.  ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ಪೊಲೀಸರು ಮೃತ ಮಹೇಶನ ಪತ್ನಿ ಶಿಲ್ಪಾ ಹಾಗೂ ಅವಳ ಪ್ರಿಯಕರನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments