ಮದುವೆಯಾದ 8 ವರ್ಷಗಳ ನಂತರ, ಹೆಂಡತಿ ದಪ್ಪವಾಗಲು ಪ್ರಾರಂಭಿಸಿದಳು ಎಂಬ ಕಾರಣ ಮುಂದಿಟ್ಟುಕೊಂಡು ಅವಳಿಂದ ವಿಚ್ಛೇದನ ಬಯಸಿದ ಗಂಡ!
ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ಸಹಾಯಕ್ಕಾಗಿ ಮನವಿ ಮಾಡಿದರು.ಸಂತ್ರಸ್ತ ಮಹಿಳೆ ನಜ್ಮಾಳನ್ನು ಅವಳ ಪತಿ ಸಲ್ಮಾನ್ “ನೀನು ದಪ್ಪವಾಗಿದ್ದೀ, ನಿನ್ನೊಂದಿಗೆ ಇರಲು ಸಾಧ್ಯವಿಲ್ಲ, ಹಾಗಾಗಿ ನಾನು ವಿಚ್ಛೇದನ ನೀಡುತ್ತಿದ್ದೇನೆ.” ಹೀಗೆ ಹೇಳುತ್ತಾ, ಆತ ಅವಳನ್ನು ಮನೆಯಿಂದ ಹೊರ ಹಾಕಿ ತಲಾಕ್ ನೀಡಿದ್ದಾನೆ.
ಇದೀಗ ಮಹಿಳೆ ತನ್ನ 7 ವರ್ಷದ ಮಗನ ಬಗ್ಗೆ ಚಿಂತಿಸುತ್ತಾ ನ್ಯಾಯಕ್ಕಾಗಿ ಪೊಲೀಸರಿಗೆ ಮೊರೆ ಹೋಗಿದ್ದಾಳೆ. ಉತ್ತರ ಪ್ರದೇಶದ ಮೀರತ್‌ನಿಂದ ವಿಚ್ಛೇದನದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬಳು ತನ್ನ ಸ್ಥೂಲಕಾಯದ ಕಾರಣದಿಂದ ಪತಿ ತನಗೆ ತಲಾಕ್ ಹೇಳಿ ವಿಚ್ಛೇದನ ನೀಡಿದ್ದಾನೆ ಎಂದು ಹೇಳುತ್ತಾರೆ. ಅಧಿಕ ತೂಕದ ಕಾರಣಕ್ಕಾಗಿ ನಿರಂತರವಾಗಿ ನಿಂದಿಸಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮೀರತ್‌ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕಿರ್ ಕಾಲೋನಿ ನಿವಾಸಿ ನಜ್ಮಾ ಅವರ ಪತಿ ಸಲ್ಮಾನ್ ಇದ್ದಕ್ಕಿದ್ದಂತೆ ವಿಚ್ಛೇದನ ನೀಡಿದ ವ್ಯಕ್ತಿ. ನಜ್ಮಾಳ ಏಕೈಕ ದೋಷವೆಂದರೆ ಅವಳು ದಪ್ಪವಾಗಿದ್ದಾಳೆ. ಈ ವಿಚಾರವಾಗಿಯೇ ಪತಿ ಪತ್ನಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ನೋಟಿಸ್ ನೋಡಿದ ಆಕೆ ಪತಿಯೊಂದಿಗೆ ಮಾತನಾಡಲು ಯತ್ನಿಸಿದಳು, ಆಗ ಪತಿ ನೀನು ದಪ್ಪ ಆಗಿದ್ದೀಯ ನಿನ್ನ ಜೊತೆ ಇರಲು ಸಾಧ್ಯವಿಲ್ಲ ಎಂದು ಉತ್ತರಿಸಿದ.
ಬಳಿಕ ನಜ್ಮಾ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಮನವಿ ಮಾಡಿದರು. ಅದೇ ಸಮಯದಲ್ಲಿ, ಯಾರಾದರೂ ಈ ರೀತಿ ಸಂಬಂಧವನ್ನು ಕೊನೆಗೊಳಿಸಿದ್ದರೆ, ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಠಾಣಾ ಲಿಸಾಡಿ ಗೇಟ್ ಪ್ರದೇಶದ ಜಾಕಿರ್ ಕಾಲೋನಿಯಲ್ಲಿ ವಾಸಿಸುವ ನಜ್ಮಾ ಅವರು 8 ವರ್ಷಗಳ ಹಿಂದೆ ಸಲ್ಮಾನ್ ನ್ನು ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗನೂ ಇದ್ದಾನೆ. 1 ತಿಂಗಳ ಹಿಂದೆ ಸಲ್ಮಾನ್ ತನ್ನನ್ನು ಮನೆಯಿಂದ ಹೊರಹೋಗುವಂತೆ ಹೇಳಿ ನಂತರ ವಿಚ್ಛೇದನ ನೋಟಿಸ್ ಕಳುಹಿಸಿದ್ದರು ಎಂದು ನಜ್ಮಾ ಆರೋಪಿಸಿದ್ದಾರೆ.
ವಿಚ್ಛೇದನದ ಕಾರಣವನ್ನು ತಿಳಿಯಲು ಪ್ರಯತ್ನಿಸಿದಾಗ, ಸಲ್ಮಾನ್ ನೀನು ದಪ್ಪವಾಗಿದ್ದೀ ಮತ್ತು ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ. ಇದಾದ ನಂತರ ನಜ್ಮಾ ಹಲವು ಬಾರಿ ಕರೆ ಮಾಡಿದರೂ ಸಲ್ಮಾನ್ ಫೋನ್ ತೆಗೆಯಲಿಲ್ಲ. ನಂತರ ರಾತ್ರಿಯೇ ಕುಟುಂಬ ಸಮೇತ ಪೊಲೀಸ್ ಠಾಣೆ ಲಿಸಾಡಿ ಗೇಟ್ ತಲುಪಿದ ಬಳಿಕ ನಜ್ಮಾ ತನಗಾದ ಸಂಕಷ್ಟವನ್ನು ಪೊಲೀಸರಿಗೆ ವಿವರಿಸಿದ್ದಾಳೆ.
ತನ್ನ ತೂಕದ ಕಾರಣದಿಂದ ಸಲ್ಮಾನ್ ಈಗಾಗಲೇ ತನ್ನನ್ನು ಹೊಡೆದಿದ್ದಾನೆ ಎಂದು ನಜ್ಮಾ ಆರೋಪಿಸಿದ್ದಾರೆ. ಆದರೆ, ಈ ವೇಳೆ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಕಳೆದ ಒಂದು ತಿಂಗಳಿನಿಂದ ನಜ್ಮಾ ತನ್ನ ಏಳು ವರ್ಷದ ಮಗನೊಂದಿಗೆ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ