Saturday, January 18, 2025
Homeಸುದ್ದಿಅತಿ ಕ್ರೂರ ಚಿರತೆಯನ್ನೇ ಕೊಂದ ಕೇರಳದ ವ್ಯಕ್ತಿ - ಅಷ್ಟಕ್ಕೂ ಆತ ಚಿರತೆಯನ್ನು ಕೊಲ್ಲಲು ಕಾರಣವೇನು?

ಅತಿ ಕ್ರೂರ ಚಿರತೆಯನ್ನೇ ಕೊಂದ ಕೇರಳದ ವ್ಯಕ್ತಿ – ಅಷ್ಟಕ್ಕೂ ಆತ ಚಿರತೆಯನ್ನು ಕೊಲ್ಲಲು ಕಾರಣವೇನು?

ಕೇರಳದ ಇಡುಕ್ಕಿ ಜಿಲ್ಲೆಯ ಮಂಕುಲಂನಲ್ಲಿ ವ್ಯಕ್ತಿಯೊಬ್ಬ ಚಿರತೆಯನ್ನು ಕೊಂದು ಹಾಕಿದ್ದಾನೆ. ಚಿರತೆಯಿಂದ ಸ್ವಲ್ಪದರಲ್ಲೇ ಪಾರಾದ ಗೋಪಾಲನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಗೋಪಾಲನ್ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕೊಂದು ಹಾಕಿದ್ದಾನೆ ಎಂದು ತಿಳಿದುಬಂದಿದೆ. ಕುತ್ತಿಗೆಗೆ ಆಳವಾದ ಗಾಯವಾದ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಶನಿವಾರ ಬೆಳಗ್ಗೆ ಗೋಪಾಲನ್ ಅವರ ಮನೆ ಸಮೀಪದ ಪ್ಲಾಟ್‌ಗೆ ಹೋಗುತ್ತಿದ್ದಾಗ ಚಿರತೆ ದಾಳಿಗೆ ಯತ್ನಿಸಿದೆ.

ದಾರಿಯಲ್ಲಿ ಬಿದ್ದಿದ್ದ ಚಿರತೆ ಜಿಗಿದು ಕಚ್ಚಿದೆ ಎಂದು ಗೋಪಾಲನ್ ತಿಳಿಸಿದ್ದಾರೆ. ಗೋಪಾಲನ್ ತನ್ನ ಪ್ರಾಣ ಉಳಿಸಿಕೊಳ್ಳಲು ಅಂದು ಹಿಡಿದಿದ್ದ ಕತ್ತಿಯಿಂದ ಚಿರತೆಯನ್ನು ಕಡಿಯಬೇಕಾಯಿತು. ಚಿರತೆಯನ್ನು ಕಡಿದ ತಕ್ಷಣ ಅದು ಕೆಳಗೆ ಬಿದ್ದಿದೆ.

ಗೋಪಾಲನ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಆತನ ಎದೆ ಮತ್ತು ಎಲುಬುಗಳಿಗೆ ತೀವ್ರ ಗಾಯಗಳಾಗಿದ್ದು, ಕೈ ಮತ್ತು ಕಾಲು ಮುರಿದಿದೆ. ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿದ ಹಲವಾರು ನಿದರ್ಶನಗಳು ಈ ಪ್ರದೇಶದಲ್ಲಿ ಈ ಹಿಂದೆ ವರದಿಯಾಗಿದ್ದವು ಎಂದು ಗೋಪಾಲನ್ ಹೇಳಿದರು.

ಘಟನೆಯ ನಂತರ ಅವರಿಗೆ ಆಂಟಿ ರೇಬಿಸ್ ಲಸಿಕೆ ಹಾಕಲಾಯಿತು. ಮಂಕುಲಂನಲ್ಲಿ ಒಂದು ತಿಂಗಳಿನಿಂದ ಚಿರತೆ ಇರುವುದನ್ನು ಗುರುತಿಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಇಲ್ಲಿನ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯಗಳು ದಾಖಲಾಗಿವೆ. ಚಿರತೆ ಹಿಡಿಯಲು ಅಧಿಕಾರಿಗಳು ಹಲವೆಡೆ ಬೋನುಗಳನ್ನು ಹಾಕಿದ್ದರು.

ಆತ ತನ್ನ ಆತ್ಮರಕ್ಷಣೆಗಾಗಿ ಚಿರತೆಯನ್ನು ಕೊಳ್ಳಬೇಕಾಗಿ ಬಂದದ್ದರಿಂದ ಆತನ ಮೇಲೆ ಯಾವುದೇ ಕೇಸು ದಾಖಲಿಸದಿರಲು ಕೇರಳ ಸರಕಾರ ನಿರ್ಧರಿಸಿದೆ. ಈ ಸಂಬಂಧ ಸರಕಾರ ಅರಣ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments