ಸೂರಂಬೈಲು: ಸೂರಂಬೈಲು ಶ್ರೀ ಗಣೇಶ ಮಂದಿರದಲ್ಲಿ 31- ಆಗಸ್ಟ್-2022 ರಂದು ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಇವರಿಂದ ಅಡೂರು ಬಳಕಿಲ ವಿಷ್ಣಯ್ಯ ವಿರಚಿತ ಶ್ರೀ ಗಣಪತಿ ಮಹಾತ್ಮೆ ಯಕ್ಷಗಾನ ಕೂಟ ನಡೆಯಿತು.
ಶ್ರೀ ವೆಂಕಟ್ರಾಜಾ ಕುಂಠಿಕಾನ,ಶ್ರೀ ವಸಂತ ಕುಮಾರ್ ದೊಡ್ಡಮಾಣಿ, ಶ್ರೀಮತಿ ರೋಹಿಣಿ ಎಸ್ ದಿವಾಣ ಯಕ್ಷಗಾನ ಭಾಗವತಿಕೆ ನಡೆಸಿದರು.
ಚೆಂಡೆ ಮತ್ತು ಮದ್ದಳೆಗಾರರಾಗಿ ಶ್ರೀ ಸ್ಕಂದ ದಿವಾಣ,ಶ್ರೀ ಕೆ.ಯಂ.ಅನಿಕೇತ ಸುಬ್ರಾಯ ಭಟ್,ಹಾಗು ಅರ್ಥಧಾರಿಗಳಾಗಿ ಶ್ರೀ ಶಿವಶಂಕರ ಭಟ್ ದಿವಾಣ, ವಸಂತ ಕುಮಾರ್ ಮಾಸ್ಟರ್ ಚೇರಾಲು, ಸದಾಶಿವ ಗಟ್ಟಿ ಮುಳಿಯಡ್ಕ, ಶ್ರೀ ವಿನಯ ಎಸ್ ಚಿಗುರುಪಾದೆ, ಶ್ರೀ ಕಾರ್ತಿಕ್ ಪಡ್ರೆ ಭಾಗವಹಿಸಿದ್ದರು.
ಮಂದಿರದ ಪರವಾಗಿ ಅಧ್ಯಕ್ಷರಾದ ಶ್ರೀ ವಸಂತ ಕುಮಾರ್ ಮಾಸ್ಟರ್ ಸ್ವಾಗತಿಸಿ,ಕಲಾವಿದರನ್ನು ಗೌರವಿಸಿ ವಂದಿಸಿದರು.