Sunday, January 19, 2025
Homeಸುದ್ದಿಕಲಾ ಸಂಶೋಧಕಿ ನೂಪುರ ಭ್ರಮರಿಯ ಸಂಪಾದಕಿ, ಪ್ರಾಚಾರ್ಯೆ ಡಾ.ಮನೋರಮಾ ಬಿ.ಎನ್ ಇವರ ದಶವರ್ಷಗಳ ನಿರಂತರ ಅಧ್ಯಯನದ ಕಲಾಕುಸುಮ...

ಕಲಾ ಸಂಶೋಧಕಿ ನೂಪುರ ಭ್ರಮರಿಯ ಸಂಪಾದಕಿ, ಪ್ರಾಚಾರ್ಯೆ ಡಾ.ಮನೋರಮಾ ಬಿ.ಎನ್ ಇವರ ದಶವರ್ಷಗಳ ನಿರಂತರ ಅಧ್ಯಯನದ ಕಲಾಕುಸುಮ ‘ಯಕ್ಷಮಾರ್ಗಮುಕುರ’ ಬಿಡುಗಡೆಗೆ ಸಿದ್ಧ

 

ಕಲಾ ಸಂಶೋಧಕಿ ನೂಪುರ ಭ್ರಮರಿಯ ಸಂಪಾದಕಿ, ಪ್ರಾಚಾರ್ಯೆ ಡಾ.ಮನೋರಮಾ ಬಿ.ಎನ್ ಇವರ ದಶವರ್ಷಗಳ ನಿರಂತರ ಅಧ್ಯಯನದ  ಕಲಾಕುಸುಮ ‘ಯಕ್ಷಮಾರ್ಗಮುಕುರ’

ಶ್ರೀ ಉಜಿರೆ ಅಶೋಕ ಭಟ್ಟರ ಸಂಚಾಲಕತ್ವದ ‘ಕುರಿಯ ವಿಠಲಶಾಸ್ತ್ರಿ ಸಾಂಸ್ಕ್ರತಿಕ ಪ್ರತಿಷ್ಠಾನ ರಿ.ಉಜಿರೆ’ ಇವರ ರಜತಪರ್ವ ಸಂಭ್ರಮ ನಿಮಿತ್ತವಾಗಿ ಪ್ರಕಾಶನದ ಕಲಾ ಸಂಶೋಧಕಿ ನೂಪುರ ಭ್ರಮರಿಯ ಸಂಪಾದಕಿ, ಪ್ರಾಚಾರ್ಯೆ ಡಾ.ಮನೋರಮಾ ಬಿ.ಎನ್ ಇವರ ದಶ ವರ್ಷಗಳ ನಿರಂತರ ಅಧ್ಯಯನದ ಕಲಾಕುಸುಮ ‘ಯಕ್ಷಮಾರ್ಗಮುಕುರ’ ಗ್ರಂಥದ ಲೋಕಾರ್ಪಣೆ, ಇದೇ ಬರುವ ಅಕ್ಟೋಬರ್ ಒಂದನೇ ತಾರೀಕು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ. ಡಿ. ವೀರೇಂದ್ರ ಹೆಗ್ಗಡೆ ಅವರ ಅನುಗ್ರಹ ಹಾಗೂ ಅಮೃತ ಹಸ್ತದಿಂದ ಕರ್ನಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎಂ.ಎಸ್ ಮಹಾಬಲೇಶ್ವರ ಭಟ್  ಇವರ ಘನ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ.

ಬಹು ನಿರೀಕ್ಷೆಯ ಭಾರತೀಯ ರಂಗನಾಟ್ಯಪದ್ಧತಿಗಳ ಸಂಶೋಧನ/ಅಧ್ಯಯನ ಕೃತಿ; ಡಾ. ಮನೋರಮಾ ಬಿ ಎನ್ ಅವರಿಂದ ರಚಿಸಲ್ಪಟ್ಟ ಸುಮಾರು 900 ಪುಟಗಳ ಉದ್ಗ್ರಂಥ ‘ಯಕ್ಷಮಾರ್ಗಮುಕುರ’ ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆಯಿಂದ ಪ್ರಕಾಶನಗೊಂದು ಅನಾವರಣಗೊಳ್ಳುವುದಕ್ಕೆ ಸಿದ್ಧವಾಗುತ್ತಿದೆ.

ನವರಾತ್ರದ ಪರ್ವಕಾಲದ ನಡುವೆ ಒಕ್ಟೋಬರ್ 1, 2022 ನೆ ದಿನಾಂಕದಂದು ಸಂಜೆ,  ಧರ್ಮಸ್ಥಳದಲ್ಲಿ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕರಕಮಲಗಳಿಂದ, ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷರು ಮತ್ತು ಇನ್ನೂ ಹಲವು ಗಣ್ಯರ ಸಮಕ್ಷಮದಲ್ಲಿ ಲೋಕಾರ್ಪಣಗೊಳ್ಳಲಿದೆ.

ಬಹುಶೃತ ವಿದ್ವಾಂಸರೂ ಶತಾವಧಾನಿಗಳೂ ಆದ ಡಾ. ಆರ್.ಗಣೇಶ್, ಹಿರಿಯ ಯಕ್ಷಗಾನ ವಿದ್ವಾಂಸರೂ ಸಂಶೋಧಕರೂ ಆದ ಡಾ.ಎಂ.ಪ್ರಭಾಕರ ಜೋಷಿ, ವಿದ್ವಾಂಸರೂ ರಂಗಕರ್ಮಿಗಳೂ ಆದ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಯಕ್ಷದಶಾವತಾರಿ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಶ್ರೀ ಕೆ.ಗೋವಿಂದ ಭಟ್ ಹಾಗೂ ನಾಟ್ಯಶಾಸ್ತ್ರ ಕೋವಿದೆ, ಭರತನಾಟ್ಯ ಪ್ರವೀಣೆ, ಸಂಶೋಧಕಿಯಾದ ಡಾ. ಶೋಭಾಶಶಿಕುಮಾರ್ ಇವರೆಲ್ಲರೂ 900 ಪುಟಗಳ ಈ ಅಧ್ಭುತ ಗ್ರಂಥದ ಬಗ್ಗೆ ತಮ್ಮ ಅವಲೋಕನವನ್ನು ಇಲ್ಲಿ ಮಂಡಿಸಿದ್ದಾರೆ.

ಪ್ರಕಟಣಾಪೂರ್ವ ಪ್ರತಿಗಳ ವಿವರಗಳಿಗೆ ಕರಪತ್ರವನ್ನು ಪರಿಶೀಲಿಸಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments