ತನ್ನ ಕಾರಿನಲ್ಲಿ ಬೃಹತ್ ಗಾತ್ರದ ನಾಗರ ಹಾವು ಅಡಗಿದೆ ಎಂದು ತಿಳಿಯದೆ ಒಂದು ತಿಂಗಳು ಕಾರಿನಲ್ಲಿ ವ್ಯಕ್ತಿಯೋರ್ವ ಪ್ರಯಾಣಿಸಿದ ಘಟನೆ ನಡೆದಿದೆ. ತನ್ನ ಕಾರಿನಲ್ಲಿ ನಾಗರ ಹಾವು ಅಡಗಿದೆ ಎಂಬುದೇ ತಿಳಿಯದೇ ಕೊಟ್ಟಾಯಂ ಅರ್ಪುಕರ ಮೂಲದ ಸುಜಿತ್ ಕುಟುಂಬ ಸಮೇತ ಪ್ರಯಾಣ ಬೆಳೆಸಿದ್ದಾರೆ.
ನಿಲಂಬೂರು ಕಾಡಿನಿಂದ ಬಂದಿದ್ದ ‘ಅತಿಥಿ’ ಒಂದು ತಿಂಗಳಿಂದ ಕಾರಿನಲ್ಲಿ ತಲೆಮರೆಸಿಕೊಂಡಿದ್ದ! ಒಂದು ತಿಂಗಳ ಹಿಂದೆ ಸುಜಿತ್ ಮತ್ತು ಆತನ ಸ್ನೇಹಿತರು ಕೆಲಸದ ನಿಮಿತ್ತ ನಿಲಂಬೂರಿಗೆ ಹೋಗಿದ್ದರು.
ಕೆಲಸ ಮುಗಿಸಿ ವಾಪಸಾಗುತ್ತಿದ್ದಾಗ ಕಾರಿನ ಸಮೀಪದಲ್ಲಿ ರಾಜ ನಾಗರಹಾವು ಕಾಣಿಸಿಕೊಂಡಿದ್ದು, ಬಳಿಕ ನಾಪತ್ತೆಯಾಗಿದೆ. ಕಾರಿಗೆ ಹಾವು ನುಗ್ಗಿದೆಯೇ ಎಂದು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಹಿಂತಿರುಗಿದ್ದರು.
ವಾರದ ಹಿಂದೆ ಸುಜಿತ್ ಕಾರು ತೊಳೆಯುತ್ತಿದ್ದಾಗ ಕಾರಿನೊಳಗೆ ಹಾವಿನ ಚರ್ಮ ಕಾಣಿಸಿಕೊಂಡಿತ್ತು. ಹಾವು ಇನ್ನೂ ಕಾರಿನಲ್ಲೇ ಇರುವುದನ್ನು ತಿಳಿದ ಸುಜಿತ್ ಹಾವು ಹಿಡಿಯುವ ವಾವ ಸುರೇಶ್ ಅವರ ಸಹಾಯ ಕೇಳಿದ್ದಾರೆ.
ಆಗ ವಾವಾ ಆಗಮಿಸಿ ಪರಿಶೀಲನೆ ನಡೆಸಿದಾಗ ಸಮೀಪದಲ್ಲಿ ಕಂಡ ಹಾವಿನ ಹಿಕ್ಕೆ ಕೇವಲ ಒಂದು ಗಂಟೆ ಹಳೆಯದಾಗಿದೆ ಎಂದು ತಿಳಿಸಿದರು. ಆದರೆ ಗಂಟೆಗಟ್ಟಲೆ ಸುತ್ತಲಿನ ಪರಿಶೀಲನೆ ನಡೆಸಿದರೂ ಹಾವು ಪತ್ತೆಯಾಗಲಿಲ್ಲ.
ಕೊನೆಗೆ ಮನೆಯ ಸಮೀಪವೇ ಹಾವಿನ ಬಾಲ ಇರುವುದು ಗಮನಕ್ಕೆ ಬಂತು. ಬಳಿಕ ಬಲೆಯಿಂದ ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ನಂತರ ಅರಣ್ಯ ಇಲಾಖೆಯ ಹಾವು ಹಿಡಿಯುವವರಾದ ಅಭಿಷೇಕ ಆಗಮಿಸಿ ಹಾವನ್ನು ಹಿಡಿದಾಗ ಎಲ್ಲರಿಗೂ ಸಮಾಧಾನವಾಯಿತು.